
ಕಲಬುರಗಿ: ಇಲ್ಲಿನ ಜಿಲ್ಲಾ ಕಾಂಗ್ರೆಸ್ ಫೇಸ್‌ಬುಕ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಬೇಕಾ? ಡಾ.ಉಮೇಶ್ ಜಾಧವ್ ಬೇಕಾ? ಎಂದು ಚುನಾವಣೆ ನಡೆಸಿ ಪೆಚಿಗೆ ಸಿಲುಕಿದ ಘಟನೆ ನಡೆದಿದೆ.
ಜಿಲ್ಲಾ ಕಾಂಗ್ರೆಸ್ ಈ ಮತದಾನವನ್ನು ಫೇಸ್‌ಬುಕ್‌ನಲ್ಲಿ ವ್ಯವಸ್ಥೆ ಮಾಡಿತ್ತು. ಇದರಲ್ಲಿ ಒಂದು ಕಡೆ ಕಲಬುರಗಿ ಹೆಮ್ಮೆ, ಖರ್ಗೆ ಬೇಕಾ? ಎಂದು. ಮತ್ತೊಂದು ಕಡೆ ಆಪರೇಷನ್ ಕಮಲಕ್ಕೆ ಬಲಿಯಾದ ಜಾಧವ್ ಬೇಕಾ? ಎಂದು ಖರ್ಗೆ ಹಾಗೂ ಡಾ.ಜಾಧವ್ ಇಬ್ಬರ ಫೋಟೋಗಳನ್ನು ಹಾಕಿ ಯಾರನ್ನು ಬೆಂಬಲಿಸುತ್ತೀರಿ ಎಂದು ಪ್ರಶ್ನಿಸಲಾಗಿತ್ತು.
ಈ ಮತದಾನದಲ್ಲಿ ಪಾಲ್ಗೊಂಡವರಲ್ಲಿ ಶೇ.90ಕ್ಕೂ ಅಧಿಕ ಜನ ಡಾ.ಜಾಧವ್ ಅವರನ್ನು ಬೆಂಬಲಿಸಿದರೆ, ಶೇ.10 ರಷ್ಟುಜನ ಮಾತ್ರ ಖರ್ಗೆಯವರನ್ನು ಬೆಂಬಲಿಸಿದ್ದಾರೆ. ಆದರೆ, ವಿಸ್ತೃತ ಮಾಹಿತಿಗೂ ಮುಂಚೆಯೇ ಜಿಲ್ಲಾ ಕಾಂಗ್ರೆಸ್ ಫೇಸ್‌ಬುಕ್ ಅಕೌಂಟ್‌ನಿಂದ ಈ ಮತದಾನದ ವಿವರಗಳನ್ನು ತೆಗೆದುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.