ನಮಗೆ ಯಾರಿಂದಲೂ ದೇಶಭಕ್ತಿಯ ಪ್ರಮಾಣ ಪತ್ರ ಬೇಕಿಲ್ಲ: ಮೋದಿಗೆ ಸಿಂಗ್ ತಿರುಗೇಟು!

By Web DeskFirst Published Oct 18, 2019, 9:28 AM IST
Highlights

ನಮಗೆ ಯಾರಿಂದಲೂ ದೇಶಭಕ್ತಿಯ ಪ್ರಮಾಣ ಪತ್ರ ಬೇಕಿಲ್ಲ: ಮನಮೋಹನ್‌| 370ನೇ ವಿಧಿ ರದ್ದತಿಯನ್ನು ಬೆಂಬಲಿಸಿದ್ದೇವೆ| ಬಿಜೆಪಿಯ ದರ್ಪವನ್ನಷ್ಟೇ ವಿರೋಧಿಸಿದ್ದೇವೆ

ಮುಂಬೈ[ಅ.18]: ಮಹಾರಾಷ್ಟ್ರ ವಿಧಾನಸಭೆ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿ ನಾಯಕರು ಸಂವಿಧಾನದ 370ನೇ ವಿಧಿ ರದ್ದತಿ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ಸಿನ ವಿರುದ್ಧ ಸರಣಿ ಟೀಕೆಗಳನ್ನು ಮಾಡುತ್ತಿರುವುದಕ್ಕೆ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ತಿರುಗೇಟು ಕೊಟ್ಟಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ಯಾರಿಂದಲೂ ದೇಶಭಕ್ತಿಯ ಪ್ರಮಾಣ ಪತ್ರ ಬೇಕಾಗಿಲ್ಲ. ಸಂವಿಧಾನದ 370ನೇ ವಿಧಿ ರದ್ದತಿ ಪರವಾಗಿಯೇ ನಾವು ಮತ ಹಾಕಿದ್ದೇವೆ. ಆದರೆ ಬಿಜೆಪಿ ತೋರಿದ ದರ್ಪವನ್ನಷ್ಟೇ ವಿರೋಧಿಸಿದ್ದೇವೆ ಎಂದು ಕಿಡಿಕಾರಿದ್ದಾರೆ.

'ದೇಶ ವಿರೋಧಿ ಶಕ್ತಿಗಳಿಗೆ ಕಾಂಗ್ರೆಸ್‌ ಆಮ್ಲಜನಕ, ದಂಡಿಸಲು 'ಮಹಾ' ಚುನಾವಣೆ ಅವಕಾಶ'

370ನೇ ವಿಧಿ ತಾತ್ಕಾಲಿಕ ಕ್ರಮವಾಗಿತ್ತು. ಅದಕ್ಕೆ ಬದಲಾವಣೆ ತರಲು ಹೊರಟಾಗ ಜಮ್ಮು-ಕಾಶ್ಮೀರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂಬುದು ನಮ್ಮ ಪಕ್ಷದ ಭಾವನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎನ್‌ಡಿಎ ಅವಧಿಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ಹಿಂದೆಂದಿಗಿಂತ ಹೆಚ್ಚಿನ ಅಧಿಕಾರ ಸಿಕ್ಕಿದೆ. ಅದನ್ನು ವಿರೋಧಿಗಳ ಮೇಲೆ ರಾಜಕೀಯ ದ್ವೇಷಕ್ಕಾಗಿ ಬಳಸಬಾರದು ಎಂದು ಹೇಳಿದರು.

ಬ್ಯಾಂಕ್‌ಗಳಿಗೆ ಕೆಟ್ಟಕಾಲ ಅಂದ ಸಚಿವೆ ನಿರ್ಮಲಾಗೆ ಡಾ. ಸಿಂಗ್‌ ತಿರುಗೇಟು!

click me!