ರಫಾಲ್ ಒಪ್ಪಂದಕ್ಕೆ ಕಾಂಗ್ರೆಸ್ ಟೀಕೆ

By Internet DeskFirst Published Sep 24, 2016, 4:18 PM IST
Highlights

ನವದೆಹಲಿ (ಸೆ.24): ಭಾರತ- ಫ್ರಾನ್ಸ್ ನಡುವೆ ನಡೆದ ರಫಾಲ್ ಜೆಟ್ ಖರೀದಿ ಒಪ್ಪಂದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.

ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ 126 ರಾಫೆಲ್ ಜೆಟ್ ಗಾಲ ಖರೀದಿಯನ್ನು ಅಂತಿಮಗೊಳಿಸಲಾಗಿತ್ತು. ಆದರೆ ಬಿಜೆಪಿ ಅದನ್ನು ಕೇವಲ 36 ಕ್ಕೆ ಇಳಿಸಿದೆ. ಭಾರತೀಯ ವಾಯು ಸೇನೆ ಪರಿಸ್ಥಿತಿ ಅಸ್ಥಿರವಾಗಿದ್ದು ಸೂಕ್ಷ್ಮವಾಗಿದೆ ಇಂತಹ ಪರಿಸ್ಥಿತಿಯಲ್ಲೂ ಬಿಜೆಪಿ ಖರೀದಿಸಬೇಕಿದ್ದ ಅತ್ಯಾಧುನಿಕ ರಾಫೆಲ್ ಜೆಟ್ ಗಳ ಸಂಖ್ಯೆಯನ್ನು 36 ಕ್ಕೆ ಇಳಿಸಿದೆ ಎಂದು ಕಾಂಗ್ರೆಸ್ ನಾಯಕ ಮಾಜಿ ರಕ್ಷಣಾ ಸಚಿವ ಎ.ಕೆ ಆಂಟೋನಿ ಆರೋಪಿಸಿದ್ದಾರೆ.

Latest Videos

ಒಂದೆಡೆ ಪಾಕಿಸ್ತಾನ, ಚೀನಾ ತಮ್ಮ ಸೇನಾ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಭಾರತದ ಅಂತರ ಹೆಚ್ಚಾಗುತ್ತಿದೆ. ಇದನ್ನು ಸರಿದೂಗಿಸುವುದಕ್ಕೆ ಕೇಂದ್ರ ಸರ್ಕಾರ ಯಾವ ರೀತಿಯ ಯೋಜನೆ ರೂಪಿಸಿದೆ ಎಂದು ರಕ್ಷಣಾ ಸಚಿವ ಎ.ಕೆ ಆಂಟನಿ ಪ್ರಶ್ನಿಸಿದ್ದಾರೆ.

click me!