ಭಾರತ ಆರೋಪ ಆಧಾರರಹಿತ: ಉರಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಷರೀಫ್

By Internet DeskFirst Published Sep 24, 2016, 3:59 PM IST
Highlights

ಇಸ್ಲಾಮಾಬಾದ್   (ಸೆ.24): ಜಮ್ಮು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲಿನ ದಾಳಿ ಕಾಶ್ಮೀರ ಪರಿಸ್ಥಿತಿಗೆ ಪ್ರಚೋದನೆ ಆಗಿರಬಹುದು ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.

ಕಳೆದೆರಡು ತಿಂಗಳಿನಿಂದ ಕಾಶ್ಮೀರದಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ್ದು ಇದರಲ್ಲಿ ತಮ್ಮ ಹತ್ತಿರ ಸಂಬಂಧಿಗಳನ್ನು ಕಳೆದುಕೊಂಡವರಿಂದ ಉರಿ ಸೇನಾ ಶಿಬಿರದ ಮೇಲಿನ ದಾಳಿ ನಡೆದಿರಬಹುದು.

ಆದರೆ ಭಾರತ ಮಾತ್ರ ಯಾವುದೇ ಸಾಕ್ಷ್ಯಾಧಾರವಿಲ್ಲದೆ ಪಾಕಿಸ್ತಾನವನ್ನು ನಿಂದಿಸುತ್ತಿದೆ ಎಂದು ನವಾಜ್ ಷರೀಫ್ ಆರೋಪಿಸಿದ್ದಾರೆ.

ಈ ಮೂಲಕ  ಉರಿ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿಲ್ಲ ಎಂದು ಅವರು ಆರೋಪ ತಳ್ಳಿ ಹಾಕಿದ್ದಾರೆ.

click me!