
ನವದೆಹಲಿ : ಮಾರ್ಚ್ ಅಂತ್ಯದೊಳಗೆ ಕಾಂಗ್ರೆಸ್‌ನ ಎಲ್ಲ ಟಿಕೆಟ್‌ಗಳನ್ನು ಅಂತಿಮಗೊಳಿಸಬೇಕು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಉಮೇದುವಾರರ ಪರಿಶೀಲನೆ ನಡೆಸುವ ಸ್ಕ್ರೀನಿಂಗ್ ಸಮಿತಿಯ ಸಭೆ ಮಾ.27, 28, 29ಕ್ಕೆ ನಡೆಯಲಿದೆ. ಅದರ ಮರುದಿನವೇ ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆಯಲಿದೆ.
ಸ್ಕ್ರೀನಿಂಗ್ ಕಮಿಟಿಯ ನೇತೃತ್ವವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ವಹಿಸಿದ್ದು ಮಾ.8 ಮತ್ತು 9ಕ್ಕೆ ರಾಜ್ಯಕ್ಕೆ ಆಗಮಿಸಿ ಟಿಕೆಟ್ ಆಕಾಂಕ್ಷಿಗಳ ಪರಿಶೀಲನೆ ನಡೆಸಲಿದ್ದಾರೆ. ಆ ಬಳಿಕ ರಾಜ್ಯ ಚುನಾವಣಾ ಸಮಿತಿ ತನ್ನ ಮುಂದಿರುವ ಎಲ್ಲ ಟಿಕೆಟ್ ಆಕಾಂಕ್ಷಿಗಳ ಉಮೇದುವಾರಿಕೆಯನ್ನು ಪರಿಶೀಲಿಸಿ ಅವುಗಳನ್ನು ಭಟ್ಟಿಇಳಿಸಿ ಸ್ಕ್ರೀನಿಂಗ್ ಕಮಿಟಿಗೆ ಸಲ್ಲಿಸಲಿದೆ.
ನಂತರ ಸ್ಕ್ರೀನಿಂಗ್ ಕಮಿಟಿ ಮಾ.27 ರಂದು ದೆಹಲಿಯಲ್ಲಿ ಸಭೆ ಸೇರಲಿದ್ದು, ಸತತ ಮೂರು ದಿನಗಳ ಕಾಲ ರಾಜ್ಯ ಚುನಾವಣಾ ಸಮಿತಿ ಸಲ್ಲಿಸಿರುವ ಪಟ್ಟಿಪರಿಶೀಲನೆ ನಡೆಸಲಿದೆ. ಈಗಿನ ಲೆಕ್ಕಚಾರದ ಪ್ರಕಾರ ಮಾ.30 ಮತ್ತು 31ರಂದು ಸಭೆ ಸೇರಲಿರುವ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದೆ.
ರಾಜ್ಯಸಭಾ ಚುನಾವಣೆ ಅಭ್ಯರ್ಥಿಗಳ ವಿಚಾರಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಮಂಗಳವಾರ ರಾಹುಲ… ಗಾಂಧಿ ಭೇಟಿ ಬಳಿಕ ಕರ್ನಾಟಕ ಭವನಕ್ಕೆ ಆಗಮಿಸಿದ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಜೊತೆ ಮಧುಸೂದನ್ ಮಿಸ್ತ್ರಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ… ಕೆಲ ಕಾಲ ಚರ್ಚೆ ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.