
ಬೆಂಗಳೂರು (ಅ.27): ಡಿವೈಎಸ್ಪಿ ಗಣಪತಿ ನಿಗೂಢ ಸಾವಿನ ಕೇಸ್ ನಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಬಿಟ್ಟಿರುವ ಜಾರ್ಜ್ ಬಾಣಕ್ಕೆ, ಕಾಂಗ್ರೆಸ್ ಬಣ ರೆಡ್ಡಿ ಬಾಣ ಬಿಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಸಿಬಿಐ ಕೇಳುತ್ತಿದೆಯಂತೆ. ಮೋದಿ ಮನ್ ಕೀ ಬಾತ್ ಪ್ರಕಾರ ಸಿಬಿಐ ತಕ್ಕ ತ್ತೈ ಕುಣಿಯುತ್ತಿದೆ. ಅಕ್ರಮ ಅದಿರು ಮಾರಾಟ ಹಾಗೂ ಸಾಗಾಟವನ್ನು ಕಾಂಗ್ರೆಸ್ ಕೆಣಕಿದೆ. ಅಲ್ಲದೇ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣವನ್ನೂ ಕಾಂಗ್ರೆಸ್ ಕೆಣಕಿದೆ. ಮೋದಿ ಆಜ್ಞೆಯಂತೆ ಸಾಕ್ಷ್ಯಾಧಾರಗಳಿಲ್ಲ ಅಂತ ಸಿಬಿಐ ಹೇಳಿದೆಯಂತೆ. ನೀನು ನೀನೆ.. ಇಲ್ಲಿ ನಾನು ನಾನೇ ಹಾಡಿನ ರೂಪದಲ್ಲಿ ಲೇವಡಿ ಮಾಡಿದ್ದಾರೆ. ಬಿಜೆಪಿಯಿಂದ ಜಾರ್ಜ್ ಬಾಣ.. ಗಣಪತಿ ಕೇಸ್ನಲ್ಲಿ ಜಾರ್ಜ್ ಆರೋಪಿಯಾದ ಬೆನ್ನಲ್ಲೇ ತಿರುಗೇಟು ನೀಡಿದೆ. ಸಿಬಿಐ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಕಾಂಗ್ರೆಸ್ ತಿರುಗಿಬಿದ್ದಿದೆ. ಬಿಜೆಪಿ ವಿರುದ್ಧದ ಆರೋಪಗಳ ಬಗ್ಗೆ ವಿಡಿಯೋ ರಿಲೀಸ್ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.