ನ. 09 ರಂದು ಹಿಮಾಚಲ ಪ್ರದೇಶ ಚುನಾವಣೆ, ಡಿ. 18 ಕ್ಕೆ ಫಲಿತಾಂಶ ಘೋಷಣೆ

By Suvarna Web DeskFirst Published Oct 12, 2017, 5:23 PM IST
Highlights

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ನ.09 ರಂದು ನಡೆಯಲಿದ್ದು, ಫಲಿತಾಂಶ ಡಿ.18 ರಂದು ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗ ಇಂದು ಅಧಿಕೃತವಾಗಿ ಘೋಷಿಸಿದೆ.

ನವದೆಹಲಿ (ಅ.12): ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ನ.09 ರಂದು ನಡೆಯಲಿದ್ದು, ಫಲಿತಾಂಶ ಡಿ.18 ರಂದು ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗ ಇಂದು ಅಧಿಕೃತವಾಗಿ ಘೋಷಿಸಿದೆ.

ಗುಜರಾತ್ ಚುನಾವಣಾ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. ಡಿ. 18 ಕ್ಕಿಂತ ಮುನ್ನವೇ ಗುಜರಾತ್ ಚುನಾವಣೆ ನಡೆಯಲಿದ್ದು, ಅದು  ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ಮುಖ್ಯ ಚುನಾವಣಾಧಿಕಾರಿ ಎ ಕೆ ಜೋ಼ತಿ ಹೇಳಿದ್ದಾರೆ.

 ಹಿಮಾಚಲ ವಿಧಾನಸಭೆಯಲ್ಲಿ ಒಟ್ಟು 68 ಸ್ಥಾನಗಳಿವೆ. ಕಾಂಗ್ರೆಸ್ 36 ಸ್ಥಾನಗಳನ್ನು ಹೊಂದಿದ್ದರೆ ಬಿಜೆಪಿ 26 ಸ್ಥಾನಗಳನ್ನು ಹೊಂದಿದೆ.  ಅ.16 ರಂದು ಚುನಾವಣಾ ಪ್ರಕ್ರಿಯೆಗಳು ಆರಂಭವಾಗಲಿದ್ದು,  ನಾಮಪತ್ರ ಸಲ್ಲಿಸಲು ಅ.23 ಕೊನೆಯ ದಿನಾಂಕವಾಗಿದೆ.

ಕಾಂಗ್ರೆಸ್ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವೀರಭದ್ರ ಸಿಂಗ್’ರನ್ನು ಘೋಷಿಸಿಯಾಗಿದೆ. ಬಿಜೆಪಿ ಇನ್ನೂ ಘೋಷಿಸಿಲ್ಲ.  

ಫೋಟೋ ಕೃಪೆ: (ಎಎನ್'ಐ ಟ್ವಿಟರ್)

 

click me!