2 ದಿನ ತಡವಾಗಿ ಸ್ಟ್ರಾಂಗ್‌ ರೂಂ ತಲುಪಿದ ಇವಿಎಂ!

By Web DeskFirst Published Dec 2, 2018, 9:40 AM IST
Highlights

ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮುಗಿದ 48 ಗಂಟೆಗಳ ಬಳಿಕ ಇವಿಎಂ ಮಷೀನ್‌ಗಳು ಸ್ಟ್ರಾಂಗ್ ರುಂ ತಲುಪಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತಾಗಿ ಸದ್ಯ ಕಾಂಗ್ರೆಸ್ ತಕರಾರು ಎತ್ತಿದೆ.

 

ಭೋಪಾಲ್‌[ಡಿ.02]: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗಳು ಮುಕ್ತಾಯಗೊಂಡರೂ ವಿವಾದಗಳು ನಿಲ್ಲುತ್ತಿಲ್ಲ. ಕಳೆದ ಬುಧವಾರವೇ ಚುನಾವಣೆ ಮುಗಿದಿದ್ದರೂ ರಾಜ್ಯದ ಸಾಗರ್‌ ಜಿಲ್ಲೆಯಲ್ಲಿನ ಮತಗಟ್ಟೆಯೊಂದರ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) 48 ಗಂಟೆಗಳ ಬಳಿಕ ಸ್ಟ್ರಾಂಗ್‌ ರೂಂ ತಲುಪಿವೆ ಎಂಬ ಆರೋಪ ಕೇಳಿಬಂದಿದೆ.

‘ಈ ಕ್ಷೇತ್ರದಲ್ಲಿ ರಾಜ್ಯದ ಗೃಹ ಸಚಿವ ಭೂಪೇಂದ್ರ ಸಿಂಗ್‌ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸಾಗರ್‌ ಜಿಲ್ಲೆಯಲ್ಲಿನ ಖುರಾಯಿ ಪಟ್ಟಣದಲ್ಲಿನ ಇವಿಎಂಗಳನ್ನು ಮತದಾನ ಮುಗಿದ ನಂತರ ಸಿಂಗ್‌ ಅವರ ಮಾಲೀಕತ್ವದ ಹೋಟೆಲ್‌ಗೆ ಒಯ್ದು ತಿರುಚಲಾಗಿದೆ. ಚುನಾವಣೆ ಮುಗಿದ 2 ದಿನದ ಬಳಿಕ, ಅಂದರೆ ಶುಕ್ರವಾರ ಇವಿಎಂಗಳನ್ನು ಸ್ಟ್ರಾಂಗ್‌ ರೂಂಗೆ ತರಲಾಗಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಆದರೆ ಚುನಾವಣಾ ಆಯೋಗ ಈ ಆರೋಪ ನಿರಾಕರಿಸಿದೆ. ‘ಕಾಂಗ್ರೆಸ್‌ ಆರೋಪಿಸಿರುವ ಇವಿಎಂಗಳು ಮತದಾನಕ್ಕೆ ಬಳಕೆಯಾಗಿಲ್ಲ. ಬಳಕೆಯಲ್ಲಿದ್ದ ಇವಿಎಂಗಳು ಕೆಟ್ಟು ಹೋದ ಸಂದರ್ಭದಲ್ಲಿ ಇವುಗಳನ್ನು ಬಳಸಲು ತರಲಾಗಿತ್ತು. ಇಂಥ ಒಟ್ಟು 34 ಇವಿಎಂಗಳು ಬಳಕೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದೆ.

click me!