ಪ್ರಯಾಗ್‌ರಾಜ್‌ನಲ್ಲಿ ಮದುವೆಗಳಿಗೆ ಬಿತ್ತು ಬ್ರೇಕ್!

Published : Dec 02, 2018, 09:26 AM IST
ಪ್ರಯಾಗ್‌ರಾಜ್‌ನಲ್ಲಿ ಮದುವೆಗಳಿಗೆ ಬಿತ್ತು ಬ್ರೇಕ್!

ಸಾರಾಂಶ

ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌(ಅಲಹಾಬಾದ್‌)ನಲ್ಲಿ 2019ರ ಜನವರಿ ಮತ್ತು ಮಾರ್ಚ್ ಅವಧಿಯಲ್ಲಿ ಯಾವುದೇ ಮದುವೆ ಕಾರ್ಯಕ್ರಮ ಆಯೋಜಿಸದಂತೆ ಆದೇಶ ಹೊರಡಿಸಿದೆ.

ಲಖನೌ[ಡಿ.02]: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌(ಅಲಹಾಬಾದ್‌)ನಲ್ಲಿ 2019ರ ಜನವರಿ ಮತ್ತು ಮಾರ್ಚ್ ಅವಧಿಯಲ್ಲಿ ಯಾವುದೇ ವಿವಾಹ ಕಾರ್ಯಕ್ರಮ ಆಯೋಜಿಸದಂತೆ ಯೋಗಿ ಆದಿತ್ಯನಾಥ್‌ ಸರ್ಕಾರ ಆದೇಶ ಹೊರಡಿಸಿದೆ.

ಈ ಅವಧಿಯಲ್ಲಿ ನಗರದಲ್ಲಿ ಅದ್ಧೂರಿ ಕುಂಭಮೇಳ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ, ಪ್ರಯಾಗ್‌ರಾಜ್‌ ಸೇರಿದಂತೆ ಸುತ್ತಮುತ್ತಲ ನಗರಗಳ ಕಲ್ಯಾಣ ಮಂಟಪಗಳು ಹಾಗೂ ಇತರೆ ಹಾಲ್‌ಗಳನ್ನು, ಭಕ್ತರ ವಾಸ್ತವ್ಯಕ್ಕೆಂದು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ. ಹೀಗಾಗಿ ಈಗಾಗಲೇ ನಗರದಲ್ಲಿ ಮದುವೆ ಆಯೋಜಿಸಲು ನಿರ್ಧರಿಸಿದ್ದವರು, ಅದನ್ನು ಮುಂದೂಡಬೇಕು, ಇಲ್ಲವೇ ಬೇರೆ ನಗರಗಳಿಗೆ ವರ್ಗಾಯಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಅಲ್ಲದೆ ಯಾವುದೇ ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ಬುಕ್‌ ಆಗಿದ್ದರೆ ಅದನ್ನು ರದ್ದುಪಡಿಸುವಂತೆಯೂ ಕಲ್ಯಾಣ ಮಂಟಪದ ಮಾಲೀಕರಿಗೆ ಸೂಚಿಸಿದೆ. ಕುಂಭ ಮೇಳಕ್ಕೆ ಕೋಟ್ಯಂತರ ಜನ ಆಗಮಿಸುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 2019ರ ಜ.15ರಿಂದ ಮಾ.4ರವರೆಗೆ ಕುಂಭಮೇಳದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

indigo flight: ದೆಹಲಿ ಇಂಡಿಗೋ ವಿಳಂಬದಿಂದಾಗಿ ಸದನಕ್ಕೆ ತಡವಾಗಿ ಬಂದ ಸಚಿವರು!
ನವೋದಯ ವಿವಾದ: 'ನಮ್ಮದು ಒಕ್ಕೂಟ ಸಮಾಜ' ತಮಿಳುನಾಡಿಗೆ ಸುಪ್ರೀಂ ಕೋರ್ಟ್ ತಪರಾಕಿ