ಶ್ರೀರಾಮನ – ಹಿಂದೂ ಧರ್ಮದ ಅಸ್ತಿತ್ವ ಪ್ರಶ್ನಿಸುವ ಕಾಂಗ್ರೆಸ್’ನವರು ಹೇಗೆ ಪಾಂಡವರಾಗುತ್ತಾರೆ..?

By Suvarna Web DeskFirst Published Mar 19, 2018, 2:21 PM IST
Highlights

ರಾಮನ ಇರುವಿನ ಹಾಗೂ ಹಿಂದೂ ಧರ್ಮದ ಅಸ್ತಿತ್ವವನ್ನೇ ಪ್ರಶ್ನೆ ಮಾಡುವ ಕಾಂಗ್ರೆಸ್ ಈಗೇಕೆ ತಮ್ಮನ್ನು ಪಾಂಡವರು ಎಂದು ಕರೆದುಕೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ : ರಾಮನ ಇರುವಿನ ಹಾಗೂ ಹಿಂದೂ ಧರ್ಮದ ಅಸ್ತಿತ್ವವನ್ನೇ ಪ್ರಶ್ನೆ ಮಾಡುವ ಕಾಂಗ್ರೆಸ್ ಈಗೇಕೆ ತಮ್ಮನ್ನು ಪಾಂಡವರು ಎಂದು ಕರೆದುಕೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕಾಂಗ್ರೆಸ್ ನಡುವೆ ಇದೀಗ ಮಹಾಭಾರತದ ಜಗಳ ಮಿತಿ ಮೀರಿದ್ದು, ಪರಸ್ಪರ ವಾಗ್ವಾದಗಳು ಭುಗಿಲೇಳುತ್ತಲೇ ಇದೆ. ಇದೀಗ ಬಿಜೆಪಿಯವರು ಕೌರವರು, ಕಾಂಗ್ರೆಸ್’ನವರು ಪಾಂಡವರು ಎಂಬ ಹೇಳಿಕೆಗೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಿದ್ದಾರೆ.

ಯಾವ ಪಕ್ಷ ಶ್ರೀ ರಾಮನ ಇರುವು ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಪ್ರಶ್ನೆ ಮಾಡುತ್ತಿತ್ತೋ ಆ ಪಕ್ಷವೇ ಇದೀಗ ತಾವು ಪಾಂಡವರು ಕೌರವರು ಎಂಬ ಹೇಳಿಕೆ ನೀಡುತ್ತಿದೆ ಎಂದು  ಹೇಳಿದರು.

ಮಹಾಭಾರತದ ಕೌರವರಿಗೆ ಬಿಜೆಪಿ ಹಾಗೂ ಆರ್'ಎಸ್'ಎಸ್ ಹೋಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಶತಮಾನಗಳಿಂದಲೂ ಅಧಿಕಾರಕ್ಕಾಗಿ ಹೋರಾಟ ನಡೆಯುತ್ತಾ ಬಂದಿದೆ. ಕೌರವರು ಬಲಿಷ್ಠರು ಹಾಗೂ ಸೊಕ್ಕಿನಿಂದ ವರ್ತಿಸುತ್ತಿದ್ದರು, ಇದೇ ವೇಳೆ ಪಾಂಡವರು ವಿನಮ್ರರಾಗಿದ್ದರು ಹಾಗೂ ಸತ್ಯಕ್ಕಾಗಿ ಹೋರಾಡುತ್ತಿದ್ದರು ಎಂದು ಕಾಂಗ್ರೆಸ್ ಅಧಿವೇಶನದಲ್ಲಿ ಹೇಳಿದ್ದರು.

click me!