
ನವದೆಹಲಿ (ಏ.14): ವೈದ್ಯಕೀಯ ಹಾಗೂ ದಂತ-ವೈದ್ಯಕೀಯ ಕೋರ್ಸ್’ಗಳಿಗೆ ನಡೆಸಲಾಗುವ ರಾಷ್ಟ್ರೀಯ ಪ್ರವೇಶ ಹಾಗೂ ಅರ್ಹತಾ ಪರೀಕ್ಷೆ (NEET/ನೀಟ್)ಯಲ್ಲಿ ಮುಂಬರುವ ವರ್ಷದಿಂದ (2018-19) ಉರ್ದು ಭಾಷೆಯನ್ನು ಸೇರಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಆದರೆ ಈ ಬಾರಿಯ ನೀಟ್-2017 ಪರೀಕ್ಷೆಗಳಲ್ಲಿ ಉರ್ದು ಭಾಷೆಯನ್ನು ಸೇರಿಸುವುದು ಅಸಾಧ್ಯವೆಂದು ಕೇಂದ್ರ ಸರ್ಕಾರ ಹೇಳಿರುವುದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ‘ ಈ ವರ್ಷ ನೀಟ್’ನಲ್ಲಿ ಉರ್ದು ಸೇರ್ಪಡೆಗೊಳಿಸುವುದು ಬಹಳ ಕಷ್ಟಕರ. ಏನಾದರೂ ಪವಾಡ ಮಾಡುವಂತೆ (ಸರ್ಕಾರವನ್ನು) ಹೇಳುವಂತಿಲ್ಲ,’ ಎಂದು ಅರ್ಜಿದಾರ ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾಗೆ ಹೇಳಿದೆ.
ನೀಟ್ ಪರೀಕ್ಷೆಗಳಲ್ಲಿ ಉರ್ದು ಭಾಷೆಯನ್ನೂ ಕೂಡಾ ಸೇರಿಸಬೇಕೆಂದು ಕೋರಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ (ಎಸ್’ಐಓ) ಸಂಘಟನೆಯು ಸುಪ್ರೀಂ ಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿತ್ತು.
ಜನಗಣತಿ ವರದಿಯ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಮಾತನಾಡಲ್ಪಡುವ ಭಾಷೆಗಳ ಪೈಕಿ ಉರ್ದು ಭಾಷೆಯು ಆರನೇ ಸ್ಥಾನದಲ್ಲಿದೆ.
ಮೇ 7ಕ್ಕೆ ದೇಶದಾದ್ಯಂತ ನೀಟ್ ಪರೀಕ್ಷೆಗಳು ನಡೆಯಲಿದ್ದು, ಆನ್’ಲೈನ್ ನೋಂದಣೆಗೆ ಮಾ.1 ಕೊನೆಯ ದಿನವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.