ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್'ಗೆ ಬಿಗ್ ಶಾಕ್: ಸರ್ಕಾರಕ್ಕೆ ಯಾಮಾರಿಸಿದ್ರಾ ಗೀತಾ ಮಹದೇವ ಪ್ರಸಾದ್!

Published : Jul 04, 2017, 08:31 AM ISTUpdated : Apr 11, 2018, 01:00 PM IST
ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್'ಗೆ ಬಿಗ್  ಶಾಕ್: ಸರ್ಕಾರಕ್ಕೆ ಯಾಮಾರಿಸಿದ್ರಾ ಗೀತಾ ಮಹದೇವ ಪ್ರಸಾದ್!

ಸಾರಾಂಶ

ಗುಂಡ್ಲುಪೇಟೆ ಕಾಂಗ್ರೆಸ್​ ಶಾಸಕಿ ಗೀತಾ ಮಹದೇವಪ್ರಸಾದ್​ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿದೆ. ರೂಫ್​ ಟಾಪ್​ ಸೋಲಾರ್​ ಘಟಕ ಅಳವಡಿಕೆ ಯೋಜನೆಯಲ್ಲಿ ಬೇನಾಮಿ ಕಂಪನಿ ಮೂಲಕ ಟೆಂಡರ್​ ಪಡೆದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಾಗಿದೆ.

ಮೈಸೂರು(ಜು.04): ಗುಂಡ್ಲುಪೇಟೆ ಕಾಂಗ್ರೆಸ್​ ಶಾಸಕಿ ಗೀತಾ ಮಹದೇವಪ್ರಸಾದ್​ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿದೆ. ರೂಫ್​ ಟಾಪ್​ ಸೋಲಾರ್​ ಘಟಕ ಅಳವಡಿಕೆ ಯೋಜನೆಯಲ್ಲಿ ಬೇನಾಮಿ ಕಂಪನಿ ಮೂಲಕ ಟೆಂಡರ್​ ಪಡೆದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಾಗಿದೆ.

ರಾಜ್ಯ ಗೋದಾಮು ನಿಗಮದಲ್ಲಿ ರೂಫ್​ ಟಾಪ್​ ಸೋಲಾರ್​ ಉತ್ಪಾದನಾ ಘಟಕ ಅಳವಡಿಕೆಯಲ್ಲಿ  ಟೆಂಡರ್​ ಪಡೆದ ಆರೋಪ ಮೇಲೆ ದೂರು ದಾಖಲಾಗಿದೆ. ರಾಜ್ಯದಲ್ಲಿ ನಿರ್ಮಾಣಗೊಳ್ಳಲಿರುವ 193 ಗೋದಾಮು ನಿಗಮದ ಕಟ್ಟಡಗಳಲ್ಲಿ ರೂಫ್​ ಟಾಪ್​ ಸೋಲಾರ್ ಘಟಕಗಳಲ್ಲಿ 18 ಲಕ್ಷ ರೂ. ಪಾವತಿಸಿ 2.500 ಕೋಟಿ ರೂ ಮೊತ್ತದ ಟೆಂಡರ್​ ಪಡೆದಿರುವ ಆರೋಪ ಮಾಡಲಾಗಿದೆ. ಅಲ್ಲದೇ ಟೆಂಡರ್​ ಪ್ರಕ್ರಿಯೆಯಲ್ಲಿ ಕೇವಲ ಶಾಸಕಿ ಗೀತಾ ಮಹದೇವಪ್ರಸಾದ್​ ಅವರ ನಿಯಂತ್ರಣದಲ್ಲಿರುವ ಕಂಪನಿ ಮಾತ್ರ ಭಾಗವಹಿಸಿತ್ತು ಎಂದೂ ಹೇಳಲಾಗಿದೆ.

100 ಮೆಗಾವ್ಯಾಟ್​ ಉತ್ಪಾದನಾ ಸಾಮರ್ಥ್ಯದ ಉತ್ಪಾದನಾ ಘಟಕಗಳ ಟೆಂಡರ್​ 25 ವರ್ಷಗಳ  ಅವಧಿಗೆ ಪಡೆಯಲಾಗಿದೆ ಎಂದು ಬೆಂಗಳೂರಿನ ಎಸ್​.ಟಿ. ಮೂರ್ತಿ ಎಂಬವರು ತನಿಖೆಗೆ ಕೋರಿ ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ