ಪದ್ಮನಾಭ ದೇಗುಲದಿಂದ 8 ವಜ್ರ ಮಾಯ!

By Suvarna Web DeskFirst Published Jul 4, 2017, 12:04 AM IST
Highlights

ನಾಪತ್ತೆಯಾದವಜ್ರಗಳುದೈನಂದಿನಪೂಜಾಕೈಂಕರ್ಯದಪ್ರಮುಖಅಂಶಗಳುಎಂದುಪದ್ಮನಾಭಮಂದಿರದಆಡಳಿತದಲ್ಲಿಪಾರದರ್ಶಕತೆತರುವಪ್ರಕರಣದಮೇಲ್ವಿಚಾರಣೆಹೊತ್ತಿರುವಸುಪ್ರೀಂಗೆಅಮಿಕಸ್ಕ್ಯೂರಿಮತ್ತುಹಿರಿಯವಕೀಲರಾದಗೋಪಾಲ್ಸುಬ್ರಮಣಿಯಂಹೇಳಿದ್ದಾರೆ

ತಿರುವನಂತಪುರ(ಜು.04): ದೇಶದ ಶ್ರೀಮಂತ ದೇಗುಲಗಳ ಪೈಕಿ ಒಂದಾ ಇಲ್ಲಿನ ಪ್ರಸಿದ್ಧ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ 8 ವಜ್ರಗಳು ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಅಪರಾಧ ವಿಭಾಗದ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್‌ಗೆ ಅಮಿಕಸ್ ಕ್ಯೂರಿ ತಿಳಿಸಿದ್ದಾರೆ. ನಾಪತ್ತೆಯಾದ ವಜ್ರಗಳು ದೈನಂದಿನ ಪೂಜಾಕೈಂಕರ್ಯದ ಪ್ರಮುಖ ಅಂಶಗಳು ಎಂದು ಪದ್ಮನಾಭ ಮಂದಿರದ ಆಡಳಿತದಲ್ಲಿ ಪಾರದರ್ಶಕತೆ ತರುವ ಪ್ರಕರಣದ ಮೇಲ್ವಿಚಾರಣೆ ಹೊತ್ತಿರುವ ಸುಪ್ರೀಂಗೆ ಅಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲರಾದ ಗೋಪಾಲ್ ಸುಬ್ರಮಣಿಯಂ ಹೇಳಿದ್ದಾರೆ. ದೇವಾಲಯದ ಗರ್ಭಗುಡಿಯಲ್ಲಿ ಇಡಲಾಗಿದ್ದ ವಜ್ರ ಕಾಣೆಯಾದ ಕುರಿತು ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎನ್.ಸತೀಶ್ ಅವರಿಂದ ಬಯಲಾಗಿದೆ. ದೇವಸ್ಥಾನಕ್ಕೆ ಬಂದ ಕಾಣಿಕೆಗಳನ್ನು ಪರಿಶೀಲನೆ ಮಾಡುವ ವೇಳೆ ಈ ಪ್ರಕರಣ ಬಯಲಿಗೆ ಬಂದಿದೆ.

click me!