ಶ್ರೀಮಂತ ಪತ್ನಿಯ ಆತ್ಮಹತ್ಯೆ: ಮಗಳನ್ನು ಕಳೆದುಕೊಂಡ ತಂದೆಯ ಆರೋಪವೇನು?

Published : Nov 15, 2016, 07:54 AM ISTUpdated : Apr 11, 2018, 12:40 PM IST
ಶ್ರೀಮಂತ ಪತ್ನಿಯ ಆತ್ಮಹತ್ಯೆ: ಮಗಳನ್ನು ಕಳೆದುಕೊಂಡ ತಂದೆಯ ಆರೋಪವೇನು?

ಸಾರಾಂಶ

ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮೈಸೂರಿನ ಅಕ್ಷತಾ ನಿವಾಸದಲ್ಲಿ ಪೋಷಕರ ಗೋಳಾಟ ಹೇಳತೀರದಾಗಿದೆ. ಇದ್ದ ಇಬ್ಬರು ಮಕ್ಕಳಲ್ಲಿ ಒಬ್ಬಳನ್ನು ಕಳೆದುಕೊಂಡಿರುವ ಅವರು, ಆಕಾಶವೇ ಕಳಚಿ ಬಿದ್ದಂತೆ ದುಖಃಪಡುತ್ತಿದ್ದಾರೆ.

ಮೈಸೂರು(ನ.15): ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮೈಸೂರಿನ ಅಕ್ಷತಾ ನಿವಾಸದಲ್ಲಿ ಪೋಷಕರ ಗೋಳಾಟ ಹೇಳತೀರದಾಗಿದೆ. ಇದ್ದ ಇಬ್ಬರು ಮಕ್ಕಳಲ್ಲಿ ಒಬ್ಬಳನ್ನು ಕಳೆದುಕೊಂಡಿರುವ ಅವರು, ಆಕಾಶವೇ ಕಳಚಿ ಬಿದ್ದಂತೆ ದುಖಃಪಡುತ್ತಿದ್ದಾರೆ.

ಅಕ್ಷತಾ ತಂದೆ ಜಗದೀಶ್​ ಅವರಿಗಂತೂ ಮಗಳ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ತಮ್ಮ ಅಳಿಯ ಹಾಗೂ ಬೀಗರ ಧನ ದಾಹಕ್ಕೆ ನನ್ನ ಮುದ್ದಾದ ಮಗಳು ಬಲಿಯಾಗಿದ್ದು, ಆರೋಪಿಗಳಿಗೆ ತಕ್ಷೆ ಕೊಡಿಸಿ ಸ್ವಾಮಿ ಎಂದು ಅಳುತ್ತಿದ್ದಾರೆ.  ಮಗಳು ಚೆನ್ನಾಗಿರಲೆಂದು ದುಬಾರಿ ಖರ್ಚುಮಾಡಿ ಮದುವೆ ಮಾಡಿಕೊಟ್ಟ ನಾನು ಮದುವೆ ನಂತರವೂ ಆಕೆಯ ಖರ್ಚುಗಳನ್ನು ಭರಿಸುತ್ತಿದ್ದೆ. ಅಳಿಯ ಹೇಳಿದಂತೆಲ್ಲಾ ಕೇಳುತ್ತಿದ್ದೆ. ಆದರೂ ಈಗ ಅವರ ಕಿರುಕುಳದಿಂದ ನನ್ನ ಮಗಳು ಬಲಿಯಾಗಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಮದುವೆಯಾಗಿ 4 ವರ್ಷ ಆದರೂ ನಮ್ಮ ಮಗಳು ನಮ್ಮ ಮನೆಯಲ್ಲಿ ಇದ್ದುದ್ದೇ ಹೆಚ್ಚು. ಅವಳಿಗೆ ನಿತ್ಯ ಕಿರುಕುಳ ನೀಡಿ ತವರಿಗೆ ಕಳುಹಿಸುತ್ತಿದ್ದರು. ನಾನು ಮಗಳ ಸಂಸಾರ ಸರಿ ಮಾಡಲು ಸಾಕಷ್ಟು ಭಾರಿ ಪ್ರಯತ್ಯ ಮಾಡಿದ್ದು, ಬೆಂಗಳೂರಿನ ಕುಟುಂಬ ನ್ಯಾಯಾಲಯದಲ್ಲಿ ಇಬ್ಬರ ನಡುವೆ ಸಾಕಷ್ಟು ಭಾರಿ ಕೌನ್ಸಿಲಿಂಗ್​ ನಡೆಸಿದ್ದರು. ಕೊನೆಯ ಭಾರಿ ನವೆಂಬರ್​ 11 ರಂದು ಕೌನ್ಸಿಲಿಂಗ್​ ನಡೆದಾಗ  ಆರೋಪಿ ಅಳಿಯ ಮಂಜುನಾಥ್​ ನನ್ನ ಮಗಳು ಅಕ್ಷತಾಳನ್ನು ಕರೆದುಕೊಂಡು ಹೋಗಲು ಒಂದು ಲಿಸ್ಟ್​ ನೀಡಿದ್ದ. ಅದರಲ್ಲಿ ಆತನಿಗೆ ಬಿಎಂಡಬ್ಯ್ಲು ಕಾರು ನೀಡಿಬೇಕು, ಮಗಳು ಆತನ ಮನೆಗೆ ಹೋದರೆ ಅವನ ಪೋಷಕರು ಹೇಳಿದಂತೆ ಕೇಳಬೇಕು. ಮನೆಯಲ್ಲಿ ಆಳಿನಂತೆ ಇದರಬೇಕು ಎಂದೆಲ್ಲ ತಮ್ಮ ಮಗಳಿಗೆ ಹೇಳಿದ್ದನಂತೆ. ಕೌನ್ಸಿಲಿಂಗ್​ ಮುಗಿಸಿ ಬಂದ ಮಗಳು ನೊಂದು ಈ ರೀತಿ ಮಾಡಿಕೊಂಡಿದ್ದಾಳೆ ಎನ್ನುವುದು ಅವರ ಆರೋಪ. 

ಎಲ್ಲಾ ಗಲಾಟೆಗಳ ನಡುವೆ ಅಳಿಯನಿಗಾಗಿ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 30&40 ಅಳತೆಯ ನಿವೇಶನ ಕೊಡಿಸಿದ್ದೆ, ಎಸ್​.ಬಿ.ಎಂ. ಬ್ಯಾಂಕ್​ನ'ಲ್ಲಿ 1.5 ಲಕ್ಷದ ಡಿಡಿ ಕೊಟ್ಟಿದ್ದೆ, ಆತ ಹೇಳಿದಂತೆಲ್ಲಾ ಕೇಳಿದ್ದೆ ಎಂದು ಅಕ್ಷತಾ ತಂದೆ ಜಗದೀಶ್​ ಆರೋಪಿಸಿದ್ದಾರೆ. ಆದರೂ ಹೆಚ್ಚಿನ ವರದಕ್ಷಿಣೆಗಾಗಿ  ಅಳಿಯ ಮಂಜುನಾಥ್​, ಬೀಗರಾದ ಪುಟ್ಟೇಗೌಡ ಮತ್ತು ಸುಧಾಮಣಿ ಹಾಗೂ ಆಕೆಯ ಅತ್ತಿಗೆ ನೇತ್ರಾವತಿ ಕಿರುಕುಳ ನೀಡಿ ನಮ್ಮ ಮಗಳನ್ನು ಸಾಯುವಂತೆ ಮಾಡಿದ್ದಾರೆ ಎಂದು ಜಗದೀಶ್​ ಆರೋಪಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೋಲಿಸರು ಹುಡುಕಾಟ ಮುಂದುವರೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾತ್ಮ ಗಾಂಧಿ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಪಿ ಹಾಕಿ ಅಪಮಾನ; ಕಿಡಗೇಡಿಗಳ ಕೃತ್ಯಕ್ಕೆ ಆಕ್ರೋಶ
ಪಂಜದಿಂದ ಒಂದು ಹೊಡೆದ ಹುಲಿ, ಸಿಬ್ಬಂದಿ ಸಣ್ಣಹೈದ ಬಲಿ; ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಭರವಸೆ ಕೊಟ್ಟ ಇಲಾಖೆ!