
ಬೆಂಗಳೂರು(ನ.28): ನೋಟ್ ಬ್ಯಾನ್ ವಿರೋಧಿಸಿ ಕಾಂಗ್ರಸ್ ಪಕ್ಷ ದೇಶಾದ್ಯಂತ ಎಂದು ಆಕ್ರೋಶ್ ದಿವಸ್ ಆಚರಿಸುವಂತೆ ಕರೆ ನೀಡಿದೆ. ಇದರ ಅಂಗವಾಗಿ ಪ್ರತಿಭಟನೆಗಳನ್ನೂ ನಡೆಸುತ್ತಿದ್ದಾರೆ. ಆದರೆ ಈ ಪ್ರತಿಭಟನೆಗೆ ಜನ ಬೆಂಬಲ ಸಿಗದಿರುವುದರಿಂದ ಗದಗ ಬೆಟಗೇರಿ ಅವಳಿ ನಗರದಲ್ಲಿ ಇಲ್ಲಿನ ಕಾಂಗ್ರೆಸ್ ಸದಸ್ಯರು ತಮ್ಮ ವಾರ್ಡ್'ನವರಿಗೆ ಮನೆ ಕೊಡುತ್ತೇವೆಂಬ ಆಮಿಷವೊಡ್ಡಿ ಪ್ರತಿಭಟನೆಗೆ ಕರೆ ತಂದಿದ್ದಾರೆ ಎಂಬುವುದು ಸುವರ್ಣ ನ್ಯೂಸ್ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.
ಕೆಲವರಿಗೆ ತಾವ್ಯಾಕೆ ಪ್ರತಿಭಟನೆಗೆ ಬಂದಿದ್ದೇವೆ ಎಂಬ ವಿಚಾರವೇ ಗೊತ್ತಿರಲಿಲ್ಲವಾದರೆ, ಇನ್ನು ಕೆಲವರಿಗೆ 'ನಿಮಗೆ ಮನೆ ನೀಡುತ್ತೇವೆ' ಆಮಿಷವೊಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರೆ ತಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಬಳ್ಳಾರಿಯಲ್ಲೂ ಇಂತಹುದೇ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ನಗರದ ಬಸವನ ಕುಂಟೆ ಮತ್ತು ಕೌಲ್ ಬಜಾರ್ ಪ್ರದೇಶ ಸೇರಿದಂತೆ ವಿವಿಧ ಸ್ಲಂಗಳಿಂದ ನೂರಾರು ಮಹಿಳೆಯರನ್ನು ಕಾಂಗ್ರೆಸ್ ಕಾರ್ಯಕರ್ತರು ಹಣ ನೀಡಿ ಪ್ರತಿಭಟನೆ ಕರೆ ತಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇಲ್ಲೂ ತಾವ್ಯಾಕೆ ಬಂದಿದ್ದೇವೆಂದು ಜನರಿಗೆ ತಿಳಿದಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.