
ದಿನನಿತ್ಯ ಎಲ್ಲರ ಮನೆಯಲ್ಲಿಯೂ ಅಡುಗೆಗೆ ಉಪಯೋಗಿಸುವ ಸಾಮಾನ್ಯ ವಸ್ತು ಎಂದರೆ ತೆಂಗು ಆಗಿದೆ. ಇದು ಅಡುಗೆಗೆ ಮಾತ್ರವಲ್ಲದೇ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯಕರ ಅಂಶಗಳು ಅಡಗಿವೆ. ಕರಾವಳಿ ಪ್ರದೇಶ ಮತ್ತು ದಕ್ಷಿಣ ಭಾರತದ ಕೇರಳ, ಒರಿಸ್ಸಾದಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಇದರ ಕಾಯಿಯ ತಿರುಳಷ್ಟೇ ಅಲ್ಲದೇ ಈ ಮರದ ಪ್ರತಿಯೊಂದು ಅಂಶವೂ ಮಾನವನಿಗೆ ಉಪಯುಕ್ತವಾದುದಾಗಿದೆ.
ಇಂದು ಈ ಕಲ್ಪವೃಕ್ಷದ ಉಪಯೋಗವನ್ನು ತಿಳಿಯೋಣ
*ಇದರ ಹೊಂಬಾಳೆ ಮತ್ತು ಕಾಯಿಯ ತಿರುಳನ್ನು ರಕ್ತಸ್ರಾವ ಮತ್ತು ಸ್ತ್ರೀಯರಲ್ಲಿ ಕಂಡುಬರುವ ಮುಟ್ಟಿನ ತೊಂದರೆಗಳಲ್ಲಿ ಉಪಯೋಗಿಸಲಾಗುತ್ತದೆ.
*ಲೇಹ್ಯವನ್ನು ಬಾಣಂತಿ ಉಪಚಾರದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
*ಎಳನೀರನ್ನು ದಾಹ, ಉರಿಮೂತ್ರವಿದ್ದಾಗ ಸೇವಿಸಬೇಕು.
*ಇದರಿಂದ ತಯಾರಿಸಿದ ನಾರಿಕೇಳ ಲವಣವೆಂಬ ಔಷಧವನ್ನು ಹೊಟ್ಟೆ ಉರಿ, ಹೊಟ್ಟೆ ಉಬ್ಬರಗಳಲ್ಲಿ 1 ಗ್ರಾಂನಷ್ಟು ಸೇವಿಸುತ್ತಾರೆ.
*ಕೊಬ್ಬರಿಯಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆ ಹೊಟ್ಟು ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ
*ಮೂತ್ರಕೋಶದ ಕಲ್ಲಿನಲ್ಲಿ ತೆಂಗಿನ ಹೂವಿನ ಚೂರ್ಣವನ್ನು ಮೊಸರಿನೊಂದಿಗೆ ಸೇವಿಸಬೇಕು.
*ಕಾಮಾಲೆಯಲ್ಲಿ ಹೆಚ್ಚು ಎಳೆನೀರನ್ನು ಕುಡಿಯುವುದು ಉತ್ತಮ
*ತೆಂಗಿನ ತಿರುಳು ಬಲ ಮತ್ತು ತೂಕವನ್ನು ಹೆಚ್ಚಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.