ಟಿಪ್ಪು ಜಯಂತಿ ಆಚರಣೆಗೆ ಕರಾವಳಿ ಕ್ರೈಸ್ತರ ವಿರೋಧ

By Suvarna Web DeskFirst Published Nov 5, 2016, 2:14 AM IST
Highlights

ಟಿಪ್ಪು ಜಯಂತಿಯನ್ನು ನಾವು ವಿರೋಧಿಸ್ತೀವಿ ಅಂತಿದ್ದಾರೆ ಕರಾವಳಿ ಕ್ರಿಶ್ಚಿಯನ್ನರು. ಟಿಪ್ಪು ನಮ್ಮ ಸಮುದಾಯದವರನ್ನು ಕೊಂದು ಹಾಕಿದ್ದ ಕ್ರೂರಿ. ಹೀಗಾಗಿ ಟಿಪ್ಪು ಜಯಂತಿ ಆಚರಿಸಿದ್ರೆ, ನಾವು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡ್ತೀವಿ ಅಂತಿದ್ದಾರೆ ಕ್ರಿಶ್ಚಿಯನ್ನರು. ಅಷ್ಟಕ್ಕೂ ಟಿಪ್ಪು ಬಗ್ಗೆ ಕರಾವಳಿ ಕ್ರಿಶ್ಚಿಯನ್ನರಿಗೆ ಯಾಕೆ ಕೋಪ? ಇಲ್ಲಿದೆ ನೋಡಿ ಆ ಸ್ಟೋರಿ...

ಬೆಂಗಳೂರು(ನ. 05): ಟಿಪ್ಪು ಜಯಂತಿಗೆ ರಾಜ್ಯದ ಮೂಲೆ ಮೂಲೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ವಿರೋಧದ ನಡುವಲ್ಲೇ ಟಿಪ್ಪು ಜಯಂತಿಗೆ ಸಿದ್ಧತೆ ನಡೆಸ್ತಿದೆ ಸರ್ಕಾರ. ಆದ್ರೆ ಟಿಪ್ಪು ಜಯಂತಿ ಮಾಡಿದ್ರೆ ನಾವು ಸಹಿಸುವುದಿಲ್ಲ. ಆತ ನಮ್ಮ ಸಮುದಾಯವನ್ನು ಸರ್ವನಾಶ ಮಾಡಿದ್ದಾನೆ ಎಂದು ಕರಾವಳಿ ಕ್ರಿಶ್ಚಿಯನ್ನರು ಕಿಡಿಕಾರಿದ್ದಾರೆ. ಸುಮಾರು 60 ಸಾವಿರದಷ್ಟು ಕ್ರಿಶ್ಚಿಯನ್ನರನ್ನ ಟಿಪ್ಪು ಕೊಂದಿದ್ದಾನೆ ಎಂದು ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೋಸಾರಿಯೋ ಆರೋಪಿಸುತ್ತಾರೆ.

ಸರ್ಕಾರ ಟಿಪ್ಪು ಜಯಂತಿಯನ್ನ ಆಚರಿಸಿದ್ರೆ ಕರಾವಳಿ ಕ್ರಿಶ್ಚಿಯನ್ನರು ಪ್ರತಿಭಟನೆ ಮಾಡೋದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಛೇರಿ ಮುಂದೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸೋದಾಗಿ, ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೋ ಕಿಡಿ ಕಾರಿದ್ದಾರೆ.

ಟಿಪ್ಪು ಹಿಂದೂ ವಿರೋಧಿ ಆಗಿದ್ದ ಅನ್ನೋ ಕಾರಣಕ್ಕೆ, ಹಿಂದೂ ಸಂಘಟನೆಗಳು ಟಿಪ್ಪು ಜಯಂತಿ ವಿರೋಧಿಸುತ್ತಿದ್ದಾರೆ. ಇತ್ತ ಕ್ರಿಶ್ಚಿಯನ್ನರಿಗೂ ಟಿಪ್ಪು ಕಂಟಕವಾಗಿ ಕಾಡಿದ್ದು, ಕರಾವಳಿ ಕ್ರಿಶ್ಚಿಯನ್ನರೂ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಸರ್ಕಾರ ಮಾತ್ರ ವಿರೋಧಿಗಳ ಕೂಗಿಗೆ ಕಿವಿಗೊಡದೇ, ಟಿಪ್ಪು ಜಯಂತಿಗೆ ಸಿದ್ಧತೆ ನಡೆಸುತ್ತಿದೆ.

click me!