ಅಲ್ಪ ಸಂಖ್ಯಾತರ ಕೇಸ್ ಹಿಂದಕ್ಕೆ; ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ ಸಿಎಂ

By Suvarna Web DeskFirst Published Jan 26, 2018, 1:25 PM IST
Highlights

ಅಲ್ಪ ಸಂಖ್ಯಾತರ ಮೇಲಿನ ಕೇಸ್ ವಾಪಸ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನಾವು ಎಲ್ಲರ ಕೇಸನ್ನೂ ವಾಪಸ್ ತೆಗೆದುಕೊಳ್ಳುತ್ತೇವೆ.  ಹಿಂದೆ ರೈತರ ಕೇಸ್ ವಾಪಸ್ ತೆಗೆದುಕೊಂಡಿದ್ದೇವೆ.  ರೈತರೆಲ್ಲಾ ಹಿಂದೂಗಳಲ್ಲವಾ? ರೈತರು, ಮುಸಲ್ಮಾನರು, ಹಿಂದೂಗಳು ಎಲ್ಲರ ಮೇಲಿನ ಕೇಸ್ ಗಳನ್ನೂ ವಾಪಸ್ ಪಡೆಯುತ್ತೇವೆ ಎಂದು ಸಿಎಂ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು (ಜ.26): ಅಲ್ಪ ಸಂಖ್ಯಾತರ ಮೇಲಿನ ಕೇಸ್ ವಾಪಸ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನಾವು ಎಲ್ಲರ ಕೇಸನ್ನೂ ವಾಪಸ್ ತೆಗೆದುಕೊಳ್ಳುತ್ತೇವೆ.  ಹಿಂದೆ ರೈತರ ಕೇಸ್ ವಾಪಸ್ ತೆಗೆದುಕೊಂಡಿದ್ದೇವೆ.  ರೈತರೆಲ್ಲಾ ಹಿಂದೂಗಳಲ್ಲವಾ? ರೈತರು, ಮುಸಲ್ಮಾನರು, ಹಿಂದೂಗಳು ಎಲ್ಲರ ಮೇಲಿನ ಕೇಸ್ ಗಳನ್ನೂ ವಾಪಸ್ ಪಡೆಯುತ್ತೇವೆ ಎಂದು ಸಿಎಂ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತ ಹೇಳಿ ನಾವು ಜನದ್ರೋಹದ ಕೆಲಸ ಮಾಡಲ್ಲ. ಸಬ್ ಕಾ ಸಾಥ್,  ಸಬ್ ಕಾ ವಿಕಾಸ್ ಅಂದರೆ 130  ಕೋಟಿ ಜನರಿಗೂ ಅಭಿವೃದ್ಧಿ ಮಾಡೋದು, ಪ್ರೀತಿಸೋದು ಎಂದರ್ಥ. ರೈತರ ಕೇಸ್'ಗಳನ್ನು,  ಅಲ್ಪಸಂಖ್ಯಾತರ ಕೇಸ್'ಗಳನ್ನೂ ವಾಪಸ್ ತೆಗೆದುಕೊಂಡಿದ್ದೇವೆ ಎಂದು ಸಿಎಂ ಹೇಳಿದ್ದಾರೆ.   

ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಅಮಿತ್ ಶಾ ಗೆ ಬ್ರೈನ್ ಇಲ್ಲ.  ಅಮಿತ್ ಶಾ ಬ್ರೈನ್'ಲೆಸ್ ಮ್ಯಾನ್  ಎಂದು  ವ್ಯಂಗ್ಯವಾಡಿದ್ದಾರೆ.

click me!