
ಬೆಂಗಳೂರು (ಜೂ.22): ಸಿಎಂ ಸಿದ್ಧರಾಮಯ್ಯ ಸುಮಾರು 5 ಗಂಟೆಗಳ ಕಾಲ ಖಾಸಗಿ ಚಾನೆಲ್ ನ ಕಾರ್ಯಕ್ರಮವೊಂದರಲ್ಲಿ ಇಂದು ಭಾಗಿಯಾಗಿದ್ದರು. ತಮ್ಮ ಒತ್ತಡದ ಕೆಲಸದ ನಡುವೆಯೂ ಕನ್ನಡದ ಖ್ಯಾತ ನಟ-ನಿರ್ದೇಶಕ ರಮೇಶ್ ಅರವಿಂದ ಖಾಸಗಿ ಚಾನೆಲ್ಗೆ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ತಮ್ಮ ಇಡೀ ಜೀವನವನ್ನು ಇಂದು ಮೆಲುಕು ಹಾಕಿದರು.
ಸಿಎಂ ಆಗಮನದ ಹಿನ್ನಲೆಯಲ್ಲಿ ಉತ್ತರಹಳ್ಳಿಯ ಅಬ್ಬಯ್ಯ ನಾಯ್ಡು ಸ್ಟುಡಿಯೋಗೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಸಿಎಂ ಸಿದ್ಧರಾಮಯ್ಯನವರ ಆಗಮನದ ಸುಮಾರು ಎರಡು-ಮೂರು ಗಂಟೆ ಮೊದಲೇ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಎಂ ಆಗಮಿಸಿದರು. ಸ್ಟಾರ್’ಗಳಿಗೆಂದೇ ಮೀಸಲಿರಿಸಿರುವ ಏಸಿ ಕ್ಯಾರವಾನ್ ಒಳಗೆ ಹೋದರು. ಅಲ್ಲಿ ಮೇಕಪ್ ಅಂತೆಲ್ಲಾ ತಲೆ ಕೆಡಸಿಕೊಳ್ಳದೇ ನೇರವಾಗಿ ಸ್ಟುಡಿಯೋಗೆ ತೆರಳಿದರು. ಕಾರ್ಯಕ್ರಮ ಮುಗಿಸಿ ಹೊರ ಬಂದ ಬಳಿಕ ಎಲ್ಲೂ ಕಾರ್ಯಕ್ರಮದ ಗುಟ್ಟು ಬಿಟ್ಟುಕೊಡಲಿಲ್ಲ. ಲಂಚ್ ಟೈಮ್ ನಲ್ಲಿ ಮಾತನಾಡುವಾಗ ಶನಿವಾರ ಕಾರ್ಯಕ್ರಮ ಪ್ರಸಾರ ಆಗುತ್ತೆ. ಆಗ ನೀವೇ ನೋಡಿ. ಹೇಗಿದೆ ಅಂತ ನೀವೇ ತಿಳಿಸಿ ಎಂದು ಹೇಳಿ ಹೊರಟು ಹೋದರು.
ಈ ಕಾರ್ಯಕ್ರಮಕ್ಕೆ ಸಿದ್ಧರಾಮಯ್ಯ ಕುಟುಂಬದ ಸದಸ್ಯರು, ಪುತ್ರ ಯತೀಂದ್ರ, ರಾಜಕೀಯ ಆತ್ಮೀಯ ಸ್ನೇಹಿತರೂ ಆಗಮಿಸಿದ್ದರು. ಕೆ.ಜೆ.ಜಾರ್ಜ್ ಸೇರಿದಂತೆ ಎಚ್.ಎಂ.ರೇವಣ್ಣ ವಿಶೇಷ ಅತಿಥಿ ಆಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಾಧಕರ ಸ್ಪೂರ್ತಿದಾಯಕ ಬದುಕನ್ನ ತೆರೆದಿಡೋ ರಮೇಶ್ ಅರವಿಂದ್ ಅವರ ಈ ಕಾರ್ಯಕ್ರಮದಲ್ಲಿ ಈ ಹಿಂದೆ ಮಾಜಿ ಪ್ರಧಾನಿ ದೇವೆಗೌಡರು ಬಂದು ಹೋಗಿದ್ದಾರೆ. ಈಗ ರಾಜ್ಯದ ಸಿ.ಎಂ. ಸಿದ್ದರಾಮಯ್ಯನವರು ಮನದಾಳದ ಮಾತು ಮತ್ತು ತಮ್ಮ ಬದುಕಿನ ಹಾದಿಯನ್ನ ಬಿಚ್ಚಿಟ್ಟಿದ್ದಾರೆ.ಇದೇ ಶನಿವಾರ ಮತ್ತು ಭಾನುವಾರ ಸಿಎಂ ಸಿದ್ದರಾಮಯ್ಯನವರ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಪ್ರಸಾರ ಆಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.