ಸಿದ್ದರಾಮಯ್ಯ ಪಿಎಫ್'ಐ, ಎಸ್'ಡಿಪಿಐ ಕ್ರಿಮಿನಲ್'ಗಳಿಗೆ ಸಾಥ್ ನೀಡುತ್ತಿದ್ದಾರೆ: ಶೆಟ್ಟರ್

By Suvarna Web DeskFirst Published Jan 26, 2018, 12:18 PM IST
Highlights

ಅಲ್ಪಸಂಖ್ಯಾತರ ಮೇಲಿನ ಕೇಸ್ ವಾಪಸ್ ಪಡೆಯಲು ಹೊರಟ ಸರ್ಕಾರದ ನಡೆಗೆ ಬಿಜೆಪಿ ನಾಯಕ ಜಗದೀಶ್  ಶೆಟ್ಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.  

ಬೆಂಗಳೂರು (ಜ.26): ಅಲ್ಪಸಂಖ್ಯಾತರ ಮೇಲಿನ ಕೇಸ್ ವಾಪಸ್ ಪಡೆಯಲು ಹೊರಟ ಸರ್ಕಾರದ ನಡೆಗೆ ಬಿಜೆಪಿ ನಾಯಕ ಜಗದೀಶ್  ಶೆಟ್ಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.  

ಇದೊಂದು ಸಂವಿಧಾನದ ವಿರೋಧಿ ಕೆಲಸ. ಪ್ರಜಾಪ್ರಭುತ್ವಕ್ಕೆ ಮಾರಕವಾದ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಒಂದು ಕೋಮಿನವರ ಮೇಲೆ ದಾಖಲಾದ ಕ್ರಿಮಿನಲ್ ಕೇಸ್ ವಾಪಸು ಪಡೆಯುವುದು ಅತ್ಯಂತ ಅಪಾಯಕಾರಿ. ನಿರ್ದಿಷ್ಟ  ಪ್ರಕರಣದಲ್ಲಿ ವಾಪಸ್ ಪಡೆದಿದ್ದರೆ ಒಪ್ಪಬಹುದಿತ್ತು.  ಒಂದು ಜಾತಿ, ಕೋಮಿಗೆ ಸೀಮಿತವಾಗಿ ಯೋಜನೆ ರೂಪಿಸುವ ಕೆಲಸ ಸಿದ್ದರಾಮಯ್ಯ ಮೊದಲಿನಿಂದಲೂ ಮಾಡುತ್ತಿದ್ದಾರೆ. ಪಿಎಫ್'ಐ, ಎಸ್'ಡಿಪಿಐ ಮೇಲಿನ ವಾಪಸು ಪಡೆದು ಕ್ರಿಮಿನಲ್'ಗಳಿಗೆ ಸಾಥ್ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಗಲಭೆಗೆ ಯಾರು ಕಾರಣ ಅನ್ನೋದು ಎಲ್ಲರಿಗೂ ಗೊತ್ತು. ಕಳಸಾ ಬಂಡೂರಿ ಹೋರಾಟಗಾರರ ಮೇಲಿನ ಕೇಸ್ ಹಾಗೆಯೇ  ಇವೆ. ರೈತರು ಇಂದಿಗೂ ಕೋರ್ಟ್'ಗೆ ಅಲೆಯುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.  

click me!