ಪದ್ಮಶ್ರಿ ಪ್ರಶಸ್ತಿ ಪಡೆದ ರೋಮುಲಸ್ ವೈಟೇಕರ್ ಆಗುಂಬೆಯಲ್ಲಿ ಮಾಡಿದ್ದೇನು..?

By Suvarna Web DeskFirst Published Jan 26, 2018, 11:56 AM IST
Highlights

ಆಗುಂಬೆಯಲ್ಲಿ ಕಾಳಿಂಗ ಸರ್ಪ ಅಧ್ಯಯನ ನಡೆಸುತ್ತಿದ್ದ ಅಮೆರಿಕ ಮೂಲದ ಉರಗ ತಜ್ಞ ರೋಮುಲಸ್ ವೈಟೇಕರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.

ಶಿವಮೊಗ್ಗ: ಆಗುಂಬೆಯಲ್ಲಿ ಕಾಳಿಂಗ ಸರ್ಪ ಅಧ್ಯಯನ ನಡೆಸುತ್ತಿದ್ದ ಅಮೆರಿಕ ಮೂಲದ ಉರಗ ತಜ್ಞ ರೋಮುಲಸ್ ವೈಟೇಕರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.

ಇವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಎ.ಆರ್.ಆರ್.ಎಸ್ ಸಂಸ್ಥೆ ನಡೆಸುತ್ತಿದ್ದರು. ಅಲ್ಲದೇ ವಿಶ್ವದಲ್ಲಿ ಕಾಳಿಂಗ ಸರ್ಪ ಅಧ್ಯಯನ ಆರಂಭಿಸಿದ ಮೊಟ್ಟ ಮೊದಲ ಸಂಶೋಧಕ ಎನಿಸಿಕೊಂಡಿದ್ದಾರೆ. ಕಾಳಿಂಗ ಸರ್ಪಗಳ ಬೀಡಾದ ಆಗುಂಬೆ ಮಳೆಕಾಡನ್ನು ಕೇಂದ್ರವಾಗಿಟ್ಟುಕೊಂಡು ಅಧ್ಯಯನ ನಡೆಸುತ್ತಿದ್ದರು.

1975ರಲ್ಲಿ ಆಗುಂಬೆಯಲ್ಲಿ 17.5 ಅಡಿ ಉದ್ದ ಕಾಳಿಂಗ ಸರ್ಪವನ್ನು ಹಿಡಿದು ಅಧ್ಯಯನ ನಡೆಸಿದ್ದರು. ಅವರಿಗೆ ಅಧ್ಯಯನ ಸಂದರ್ಭದಲ್ಲಿ ಸಿಕ್ಕಿರುವ ಅತ್ಯಂತ ಉದ್ದ ಸರ್ಪ ದಾಗಿತ್ತು. ಇವರು ಅಧ್ಯಯನ ನಡೆಸಿ ಮಂಡಿಸಿದ ಪ್ರಬಂಧಗಳು ಸಾಕಷ್ಟು ಮನ್ನಣೆಯನ್ನು ಪಡೆದುಕೊಂಡಿವೆ.  ಅಳಿವಿನಂಚಿನಲ್ಲಿರುವ ಕಾಳಿಂಗ ಸರ್ಪಗಳನ್ನು ಉಳಿಸುವಲ್ಲಿ ಇವರ ಶ್ರಮವೂ ಮುಖ್ಯವಾದುದಾಗಿದೆ.

ಅಲ್ಲದೇ ಇವರ 2 ಸಾಕ್ಷ್ಯ ಚಿತ್ರಗಳಾದ ಕಿಂಗ್ ಸ್ನೇಕ್ ಮತ್ತು ಐ ಎಂಬವು ನ್ಯಾಷನಲ್ ಜಿಯೋಗ್ರಾಫಿಕ್, ಅನಿಮಲ್ ಪ್ಲಾನೆಟ್’ಗಳಲ್ಲಿ ಪ್ರಸಾರವಾಗಿವೆ.

click me!