ಸಿಎಂ ಸ್ವಜಾತಿ ಪ್ರೇಮ ಬಯಲು; ವಿವಿ ಉಪಕುಲಪತಿಗಳ ಅಧಿಕಾರಾವಧಿ ವಿಸ್ತರಿಸಲು ನಿರ್ಧಾರ

Published : Nov 22, 2017, 11:50 AM ISTUpdated : Apr 11, 2018, 12:47 PM IST
ಸಿಎಂ ಸ್ವಜಾತಿ ಪ್ರೇಮ ಬಯಲು; ವಿವಿ ಉಪಕುಲಪತಿಗಳ ಅಧಿಕಾರಾವಧಿ ವಿಸ್ತರಿಸಲು ನಿರ್ಧಾರ

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಜಾತಿ ಪ್ರೀತಿ ಮತ್ತೊಮ್ಮೆ ಬಯಲಾಗಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳ  ಉಪಕುಲಪತಿಗಳ ಅಧಿಕಾವಧಿಯನ್ನ ಕಾನೂನು ಬಾಹಿರವಾಗಿ ವಿಸ್ತರಿಸಲು ನಿರ್ಧಾರ ಮಾಡಿದ್ದಾರೆ. ಧಾರವಾಡ ಕೃಷಿ ವಿವಿ ಕುಲಪತಿ ಡಾ.ಡಿ.ಪಿ‌.ಬಿರಾದಾರ್​,  ಬಾಗಲಕೋಟೆ ತೋಟಗಾರಿಕೆ ವಿವಿಯ ಕುಲಪತಿ ಡಾ.ಡಿ.ಎಲ್ ಮಹೇಶ್ವರ್  ಅಧಿಕಾರಾವಧಿಯನ್ನ ಕಾನೂನು ಬಾಹಿರವಾಗಿ ವಿಸ್ತರಣೆ ಮಾಡಿಲು ಮುಂದಾಗಿದ್ದಾರೆ.​ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳ ಮಸೂದೆಗೆ ತರಾತುರಿಯಲ್ಲಿ ತಿದ್ದುಪಡಿ  ತರಲು ನಿರ್ಧಾರಿಸಿದ್ದು, ಸದ್ಯ ಇರುವ ನಾಲ್ಕು ವರ್ಷಗಳ ಕುಲಪತಿ ಅಧಿಕಾರವಧಿಯನ್ನ, ಮತ್ತೊಂದು ಅವಧಿಗೆ ವಿಸ್ತರಿಸಲು  ತೀರ್ಮಾನ ಮಾಡಲಾಗಿದೆ.

ಬೆಂಗಳೂರು (ನ.22): ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಜಾತಿ ಪ್ರೀತಿ ಮತ್ತೊಮ್ಮೆ ಬಯಲಾಗಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಕುಲಪತಿಗಳ ಅಧಿಕಾವಧಿಯನ್ನ ಕಾನೂನು ಬಾಹಿರವಾಗಿ ವಿಸ್ತರಿಸಲು ನಿರ್ಧಾರ ಮಾಡಿದ್ದಾರೆ.

ಧಾರವಾಡ ಕೃಷಿ ವಿವಿ ಕುಲಪತಿ ಡಾ.ಡಿ.ಪಿ‌.ಬಿರಾದಾರ್​,  ಬಾಗಲಕೋಟೆ ತೋಟಗಾರಿಕೆ ವಿವಿಯ ಕುಲಪತಿ ಡಾ.ಡಿ.ಎಲ್ ಮಹೇಶ್ವರ್  ಅಧಿಕಾರಾವಧಿಯನ್ನ ಕಾನೂನು ಬಾಹಿರವಾಗಿ ವಿಸ್ತರಣೆ ಮಾಡಿಲು ಮುಂದಾಗಿದ್ದಾರೆ.​  ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳ ಮಸೂದೆಗೆ ತರಾತುರಿಯಲ್ಲಿ ತಿದ್ದುಪಡಿ  ತರಲು ನಿರ್ಧಾರಿಸಿದ್ದು, ಸದ್ಯ ಇರುವ ನಾಲ್ಕು ವರ್ಷಗಳ ಕುಲಪತಿ ಅಧಿಕಾರವಧಿಯನ್ನ, ಮತ್ತೊಂದು ಅವಧಿಗೆ ವಿಸ್ತರಿಸಲು  ತೀರ್ಮಾನ ಮಾಡಲಾಗಿದೆ.

ಬಾಗಲಕೋಟೆ ತೋಟಗಾರಿಕೆ ವಿವಿಯ ಕುಲಪತಿ ಡಾ.ಡಿ.ಎಲ್ ಮಹೇಶ್ವರ ಅವರ ಅಧಿಕಾರಾದ ಅವಧಿ ಮೇ ನಲ್ಲಿ ಮುಗಿಯಲಿದ್ದು, ಈ‌ ಇಬ್ಬರನ್ನು ಮತ್ತೊಂದು ಅವಧಿಗೆ ವಿಸ್ತರಿಸಲು ಕಾನೂನು ನಲ್ಲಿ ಅವಕಾಶ ಇಲ್ಲ.  ಆದರೆ  ಮುಖ್ಯಮಂತ್ರಿಗಳು ಈ ಇಬ್ಬರು ಸ್ವಜಾತಿಯವರು ಎಂಬ ಕಾರಣಕ್ಕೆ ಮತ್ತೊಂದು ಅವಧಿ ಕುಲಪತಿ ಸ್ಥಾನದಲ್ಲಿ ಮುಂದುವರೆಸಲು ಮಸೂದೆಗೆ ತಿದ್ದುಪಡಿ ತರಲು ಹೊರಟಿದ್ದಾರೆ.ಆದರೆ ಈ ತಿದ್ದುಪಡಿಗೆ ಸ್ವತಃ ಕೃಷಿ ಸಚಿವರೇ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸದ್ಯ ಇರುವ ಕಾನೂನಿನ ಪ್ರಕಾರ ನಾಲ್ಕು ವರ್ಷದ ಅವಧಿಗೆ ಕುಲಪತಿಯಾಗಿ ನೇಮಕಗೊಂಡವರು, ಮತ್ತೊಮ್ಮೆ ಪುನರ್ ನೇಮಕಾತಿ ಮಾಡಲು ಬರುವುದಿಲ್ಲ. ಇದು ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ಎಲ್ಲ ಕೃಷಿ ವಿಶ್ವ  ವಿದ್ಯಾಲಯದಲೂ ಇದೆ ನಿಯಮ ಜಾರಿ ಇದೆ. ಆದರೆ ಅದೇ ನಿಯಮಕ್ಕೆ ತಿದ್ದುಪಡಿ ತರಲು ಮುಖ್ಯಮಂತ್ರಿಗಳು ಹೊರಟಿದ್ದು ಹಲವು ಸಂಶಯಗಳಿಗೆ ದಾರಿ ಮಾಡಿದೆ.

ಮಸೂದೆ ತಿದ್ದುಪಡಿ ಬಗ್ಗೆ ಯಾವುದೇ ಮಾಹಿತಿ‌ ನೀಡದೆ, ತರಾತುರಿಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿದ್ದರ ಹಿಂದೆ ನೇಮಕಾತಿ ಅಕ್ರಮದ ಕರಿ ನೆರಳು ಚಾಚಿರುವುದು ಬಯಲಾಗಿದೆ. ಎರಡು ವಿಶ್ವವಿದ್ಯಾಲಯ ಗಳ ವ್ಯಾಪ್ತಿಯಲ್ಲಿ ದೊಡ್ಡಮಟ್ಟದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಈಗಿರುವ ಕುಲಪತಿ ಬದಲು ಬೇರೆಯವರು ಬಂದರೆ ನೇಮಕಾತಿ ಪ್ರಕ್ರಿಯೆಗೆ ಹಿನ್ನಡೆಯಾಗಲಿದೆ. ಈ ಲೆಕ್ಕಾಚಾರದಿಂದ ಈಗಿರುವ ಕುಲಪತಿಗಳನ್ನ ಮತ್ತೊಂದು ಅವಧಿಗೆ ವಿಸ್ತರಿಸಲು ಮುಖ್ಯಮಂತ್ರಿಗಳು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ‌. ಮಸೂದೆ ತಿದ್ದುಪಡಿ ಬಗ್ಗೆ ಅಧಿಕೃತ ವಿರೋಧ ಪಕ್ಷ ಮಾತ್ರವಲ್ಲ, ಕಾಂಗ್ರೆಸ್ ನ ಯಾವೊಬ್ಬ ಸಚಿವರಿಗೂ ಮಾಹಿತಿ ಇಲ್ಲ ಎನ್ನಲಾಗಿದೆ. ಇದೇ ಬೆಳಗಾವಿ ಅಧಿವೇಶನದಲ್ಲಿ  ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತಂದು, ಸ್ವಜಾತಿ ವಿಸಿಗಳಿಗೆ ಅನುಕೂಲ ಕಲ್ಪಿಸುವ ಲೆಕ್ಕಾಚಾರ ಸರ್ಕಾರದ್ದು ಎಂಬ ಆರೋಪ ಕೇಳಿ ಬಂದಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಾವಳಿ ಉಳಿಸಿ: ಜನವರಿ 7 ರಿಂದ ಯುವ ಕಾಂಗ್ರೆಸ್‌ನಿಂದ 1,000 ಕಿ.ಮೀ ಬೃಹತ್ ಪಾದಾಯಾತ್ರೆ!
ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ