
ಜಯಪುರ(ಮಾ.05): ಮುಂಬರುವ ಚುನಾವಣೆ ನನ್ನ ಜೀವನದ ಕೊನೆಯ ಚುನಾವಣೆ ಆಗಿದ್ದು, ನನಗೆ ಆಶೀರ್ವಾದ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಯಪುರದಲ್ಲಿ ಮಾತನಾಡಿದ ಅವರು, 2006 ಉಪ ಚುನಾವಣೆ ಬಹಳ ಕಷ್ಟದ ಚುನಾವಣೆಯಾಗಿತ್ತು. ಆವಾಗ್ಲೇ ನನಗೆ ಆಶಿರ್ವಾದ ಮಾಡಿದ್ದೀರ. ಇದು ನನ್ನ ಜೀವನದ ಕೊನೆಯ ಚುನಾವಣೆ ಆಗಿರುವುದರಿಂದ ನನಗೆ ಆಶೀರ್ವಾದ ಮಾಡಿ. ಗೆದ್ದ ಮೇಲೆ ನಾನೇ ಮತ್ತೆ ರಾಜ್ಯದಲ್ಲಿ ಸಿಎಂ ಆಗ್ತೇನೆ ಎಂದು ಸಿಎಂ ಹೇಳಿದ್ದಾರೆ.
2006ರ ಉಪಚುನಾವಣೆಯಲ್ಲಿ ಒಕ್ಕಲಿಗರು 90% ನನಗೆ ಓಟ್ ಹಾಕಿದ್ದರು, ಅತ್ತು ಕರೆದು ದೇವೇಗೌಡರು ಒಂದಷ್ಟು ಓಟು ಕಿತ್ತರು. ಇದು ಕೊನೆ ಚುನಾವಣೆ, ಮುಂದೆ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ. ಮುಂದೆ ರಾಜಕೀಯವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಳಿದ ಕೆಲಸ ಮಾಡ್ತೇನೆ, ಹಾಗಾಗಿ ಇದೊಂದು ಅವಕಾಶ ಮಾಡಿಕೊಡಿ ಎಂದು ಕ್ಷೇತ್ರದ ಜನರಿಗೆ ಮನವಿ ಮಾಡಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.