ಸಿದ್ದರಾಮಯ್ಯ, ಪರಂಗೂ ಕಾಂಗ್ರೆಸ್’ನಲ್ಲಿ ಬೂತ್‌’ಗಳ ಉಸ್ತುವಾರಿ!

By Suvarna Web DeskFirst Published Jan 31, 2018, 8:26 PM IST
Highlights
  • ತಳ ಮಟ್ಟದಿಂದ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಉದ್ದೇಶ
  • ಈ ಮೂಲಕ ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಪರ ಅಲೆಯನ್ನು ಮತಗಳನ್ನಾಗಿ ಪರಿವರ್ತನೆ

ಬೆಂಗಳೂರು: ತಳ ಮಟ್ಟದಿಂದ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬೂತ್‌ಮಟ್ಟದ ಸಮಿತಿಗಳ ಬಲವರ್ಧನೆಗೆ ಹೆಚ್ಚು ಪ್ರಾಶಸ್ತ್ಯ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.

ಪ್ರಾಮುಖ್ಯತೆ ಬಿಂಬಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸೇರಿ ಪ್ರತಿಯೊಬ್ಬರಿಗೂ ಒಂದೊಂದು ಬೂತ್‌ಮಟ್ಟದ ಸಮಿತಿ ಉಸ್ತುವಾರಿ ವಹಿಸಿದೆ.

ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌’ನ ಪ್ರಮುಖ ನಾಯಕರು ಬೂತ್‌ಮಟ್ಟದ ಕಾರ್ಯಕರ್ತರೊಂದಿಗೆ ಬೆರೆತು ಕೆಲಸ ಮಾಡಬೇಕು. ಈ ಮೂಲಕ ತಳಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಪರ ಅಲೆಯನ್ನು ಮತಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿಗೆ ಕಡ್ಡಾಯ ಸೂಚನೆ ನೀಡಿದೆ.

ಗುಜರಾತ್ ಚುನಾವಣೆಯಲ್ಲಿ ಗೆಲ್ಲುವ ಅವಕಾಶವನ್ನು ಕಳೆದುಕೊಳ್ಳಲು ಬೂತ್‌ಮಟ್ಟದಲ್ಲಿ ಕಾಂಗ್ರೆಸ್ ವಿಫಲವಾಗಿದ್ದೇ ಕಾರಣ. ಇದು ಕರ್ನಾಟಕದಲ್ಲಿ ಮರುಕಳಿಸಿದಂತೆ ಬೂತ್‌ಮಟ್ಟದ ಸಮಿತಿಗಳಿಗೆ ಹೆಚ್ಚು ಒತ್ತು ನೀಡಬೇಕು.

ಇದಕ್ಕಾಗಿ ಪ್ರಮುಖ ನಾಯಕರನ್ನೂ ಬೂತ್‌ ಮಟ್ಟದ ಸಮಿತಿಗಳಲ್ಲಿ ತೊಡಗಿಸಿಕೊಳ್ಳಲು ಸೂಚಿಸಬೇಕು ಎಂದು ರಾಹುಲ್‌ಗಾಂಧಿ ನಿರ್ದೇಶನ ನೀಡಿದ್ದಾರೆ. ಮಂಗಳವಾರ ನಗರದಲ್ಲಿ ನಡೆದ ‘ನಮ್ಮ ಕ್ಷೇತ್ರ-ನಮ್ಮ ಹೊಣೆ’ ಬ್ಲಾಕ್ ಕಾಂಗ್ರೆಸ್ ಹಾಗೂ ಕೆಪಿಸಿಸಿ ಕಾರ್ಯದರ್ಶಿಗಳ ಸಭೆಯಲ್ಲಿ ಬೂತ್‌ ಮಟ್ಟದ ಸಮಿತಿಗಳ ಮಹತ್ವದ ಬಗ್ಗೆ ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್

ಒತ್ತಿ ಹೇಳಿದ್ದಾರೆ. 54 ಸಾವಿರ ಬೂತ್‌ಮಟ್ಟದ ಸಮಿತಿ ರಚಿಸಲಾಗಿದೆ. ಪ್ರತಿಯೊಬ್ಬರೂ ಕನಿಷ್ಠ 50 ಮನೆಗೆ ಭೇಟಿ ನೀಡಬೇಕು ಎಂದರು.

 

click me!