
ಬೆಂಗಳೂರು : ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಪಕ್ಷಾಂತರ ಮಾಡುತ್ತಿರುವ ಶಾಸಕರನ್ನ ತಡೆಹಿಡಿಯಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಅಸಮಾಧಾನಗೊಂಡಿರುವ ಶಾಸಕರೊಂದಿಗೆ ಸಿಎಂ ಚರ್ಚೆ ನಡೆಸಿದ್ದಾರೆ.
ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ಕೊಡುವ ಭರವಸೆಯನ್ನೂ ಕೂಡ ನೀಡಿದ್ದಾರೆ. ಮಲ್ಲಿಕಾರ್ಜುನ್ ಖೂಬಾ, ಮಾಳಿಕಯ್ಯ ಗುತ್ತೇದಾರ್ ಬಳಿಕ ಕಲುಬುರಗಿ ವಿಭಾಗದಲ್ಲಿ ಪಕ್ಷಕ್ಕಾಗುವ ಹಾನಿ ತಡೆಯಲು ಮಾಲಕರೆಡ್ಡಿಯೊಂದಿಗೆ ಸಿಎಂ ಸಂಧಾನ ಮಾತುಕತೆಯನ್ನು ನಡೆಸಿದ್ದಾರೆ.
ಚುನಾವಣೆಯಲ್ಲಿ ತಟಸ್ಥ ನೀತಿ ಅನುಸರಿಸಲು ನಿರ್ಧರಿಸಿದ್ದ ಮಾಲಕರೆಡ್ಡಿ ಮನವೊಲಿಸಿ ಚುನಾವಣೆಗೆ ಸರ್ಧಿಸುವಂತೆ ಸಿಎಂ ಸಂಧಾನ ಮಾತುಕತೆ ನಡೆಸಿದ್ದಾರೆ. ಯಾದಗಿರಿಯಿಂದ ಕಣಕ್ಕಿಳಿಯಲಿರುವ ಮಾಜಿ ಸಚಿವ ಎ.ಬಿ ಮಾಲಕರೆಡ್ಡಿ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಗೆ ಬಿಜೆಪಿ ಗಾಳ ಹಾಕಿದ ಹಿನ್ನೆಲೆಯಲ್ಲಿ , ಶಿವಾನಂದ ಪಾಟೀಲ್ ಜೊತೆ ಸಿಎಂ ದೂರವಾಣಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಪಕ್ಷ ಬಿಡದಂತೆ ಸಿಎಂ ಮನವಿ ಮಾಡಿದ್ದು, ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಇದೇ ವೇಳೆ ಸಿಎಂ ಬಳಿ ಎಂ.ಬಿ ಪಾಟೀಲ್ ಬಗ್ಗೆ ಶಿವಾನಂದ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದು, ವಿಜಯಪುರ ಜಿಲ್ಲೆಯಲ್ಲಿ ಎಂ.ಬಿ ಪಾಟೀಲ್ ಅವರಿಂದಾಗಿಯೇ ಕಾಂಗ್ರೆಸ್ ಗೆ ಕಷ್ಟ ಎದುರಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಎರಡು ದಿನಗಳೊಳಗೆ ಬಿಜೆಪಿ ಸೇರಬೇಕೋ ಬೇಡವೋ ಎಂಬುದರ ಬಗ್ಗೆ ಶಿವಾನಂದ ಪಾಟೀಲ್ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.