ಒಂದಾಗಿ ಬಂದರಷ್ಟೇ ಲಿಂಗಾಯತ ಧರ್ಮ ಪರಿಗಣನೆ: ಸಿಎಂ

By Suvarna Web DeskFirst Published Oct 2, 2017, 2:44 PM IST
Highlights

ಧರ್ಮ ಘೋಷಣೆ ಇಕ್ಕಟ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮುದಾಯಕ್ಕೆ ಮರಳಿಸಿದ್ದಾರೆ. ವೀರಶೈವರು ಹಾಗೂ ಲಿಂಗಾಯತರು ಒಟ್ಟಾಗಿ ಬಂದಲ್ಲಿ ಮಾತ್ರ ಪರಿಗಣನೆ ಸಾಧ್ಯವಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಅವರು ರವಾನಿಸಿದ್ದಾರೆ.

ಚಿತ್ರದುರ್ಗ:  ಧರ್ಮ ಘೋಷಣೆ ಇಕ್ಕಟ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮುದಾಯಕ್ಕೆ ಮರಳಿಸಿದ್ದಾರೆ. ವೀರಶೈವರು ಹಾಗೂ ಲಿಂಗಾಯತರು ಒಟ್ಟಾಗಿ ಬಂದಲ್ಲಿ ಮಾತ್ರ ಪರಿಗಣನೆ ಸಾಧ್ಯವಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಅವರು ರವಾನಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಮೊದಲು ಮಾತೆ ಮಹಾದೇವಿ ಸರ್ಕಾರಕ್ಕೆ ಪತ್ರ ಬರೆದು ಸ್ವತಂತ್ರ ಲಿಂಗಾಯತ ಧರ್ಮ ಘೋಷಣೆ ಮಾಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಸಚಿವ ಎಂ.ಬಿ.ಪಾಟೀಲ್ ಹಾಗೂ ವಿನಯ ಕುಲಕರ್ಣಿ ಕೂಡಾ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ತಮ್ಮೊಂದಿಗೆ ಮಾತನಾಡಿದ್ದರು ಎಂದರು.

Latest Videos

click me!