ಧಾರವಾಡದ ಹುತಾತ್ಮ ಯೋಧನ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಿಸಿದ ಸಿಎಂ

By Suvarna Web DeskFirst Published Nov 28, 2017, 5:41 PM IST
Highlights

ಛತ್ತೀಸ್‌ಗಢ ನಕ್ಸಲ್ ದಾಳಿಯಲ್ಲಿ ಹುತಾತ್ಮನಾದ ಧಾರವಾಡ ಯೋಧ ಮಂಜುನಾಥ್ ಜಕ್ಕನವರ್ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ₹25 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಬೆಂಗಳೂರು: ಛತ್ತೀಸ್‌ಗಢ ನಕ್ಸಲ್ ದಾಳಿಯಲ್ಲಿ ಹುತಾತ್ಮನಾದ ಧಾರವಾಡ ಯೋಧ ಮಂಜುನಾಥ್ ಜಕ್ಕನವರ್ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ₹25 ಲಕ್ಷ ಪರಿಹಾರ ಘೋಷಿಸಿದ್ದಾರೆ.

ವೀರಯೋಧ ಮಂಜುನಾಥ್ ಜಕ್ಕನವರ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗುವುದು ಎಂದು ಸಿಎಂ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಮಾವೋವಾದಿಗಳ ಗುಂಡಿನ ದಾಳಿಗೆ ಹುತಾತ್ಮರಾದ ಧಾರವಾಡದ ವೀರಯೋಧ ಮಂಜುನಾಥ್ ಜಕ್ಕನವರ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗುವುದು ಹಾಗೂ ಅವರ ಕುಟುಂಬಕ್ಕೆ ರೂ.೨೫ ಲಕ್ಷ ಪರಿಹಾರ ನೀಡಲಾಗುವುದು:

— CM of Karnataka (@CMofKarnataka)

ಮಹಾರಾಷ್ಟ್ರ- ಛತ್ತೀಸ್‌ಗಢ ಗಡಿಯಲ್ಲಿರುವ ಸಿಆರ್‌ಪಿಎಫ್ ಶಿಬಿರದ ಮೇಲೆ ಭಾನುವಾರ ತಡರಾತ್ರಿ ನಡೆದ ನಕ್ಸಲ್ ದಾಳಿಯಲ್ಲಿ ಧಾರವಾಡ ಮೂಲದ ಮಂಜುನಾಥ್ ಜಕ್ಕನವರ್ (30) ಹುತಾತ್ಮರಾಗಿದ್ದಾರೆ.

ಧಾರವಾಡ ತಾಲೂಕಿನ ಮನಗುಂಡಿಯ ಮಂಜುನಾಥ ಶಿವಲಿಂಗಪ್ಪ ಜಕ್ಕನ್ನವರ ಛತ್ತೀಸ್‌ಗಢದಲ್ಲಿ ಸಿಆರ್‌ಪಿಎಫ್‌ನ 133 ಕೋಬ್ರಾ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಮಹಾರಾಷ್ಟ್ರ- ಛತ್ತೀಸ್’ಗಢದ ಗಡಿ ಪ್ರದೇಶವಾದ ಗಡ್‌ಚಿರೋಲಿಯ ಧನೋರಾ ಬಳಿ ನಕ್ಸಲರ ಜೊತೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಗುಂಡು ತಗುಲಿ ಅವರು ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾದೇ ಮಂಜುನಾಥ ಮೃತಪಟ್ಟಿದ್ದಾರೆ.

click me!