ನೂತನ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಕಿರು ಪರಿಚಯ

By Suvarna Web DeskFirst Published Nov 28, 2017, 5:27 PM IST
Highlights

ರಾಜ್ಯದ 3 ನೇ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ರತ್ನಪ್ರಭಾರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಮೂಲಕ ಮಹಿಳೆಯರಿಗೆ 2 ಪ್ರಮುಖ ಹುದ್ದೆಗಳನ್ನು ನೀಡಿದಂತಾಗಿದೆ.  ಡಿಜಿ-ಐಜಿಪಿ ಹುದ್ದೆಗೆ ಮಹಿಳೆ, ಮುಖ್ಯ ಕಾರ್ಯದರ್ಶಿ ಹುದ್ದೆಗೂ ಮಹಿಳಾ ನೇಮಕವಾಗಿದೆ.

ಬೆಂಗಳೂರು (ನ.28): ರಾಜ್ಯದ 3 ನೇ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ರತ್ನಪ್ರಭಾರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಮೂಲಕ ಮಹಿಳೆಯರಿಗೆ 2 ಪ್ರಮುಖ ಹುದ್ದೆಗಳನ್ನು ನೀಡಿದಂತಾಗಿದೆ.  ಡಿಜಿ-ಐಜಿಪಿ ಹುದ್ದೆಗೆ ಮಹಿಳೆ, ಮುಖ್ಯ ಕಾರ್ಯದರ್ಶಿ ಹುದ್ದೆಗೂ ಮಹಿಳಾ ನೇಮಕವಾಗಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದ 3ನೇ ಮಹಿಳೆ ಎಂಬ ಹೆಗ್ಗಳಿಕೆಗೆ ರತ್ನಪ್ರಭಾ ಪಾತ್ರರಾಗಿದ್ದಾರೆ.  ಮೊದಲ ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದವರು ಥೆರೆಸಾ ಭಟ್ಟಾಚಾರ್ಯ.  2ನೇ ಬಾರಿ ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದ್ದು ಮಾಲತಿದಾಸ್. 3 ನೇ ಮುಖ್ಯ ಕಾರ್ಯದರ್ಶಿಯಾಗಿ ರತ್ನಪ್ರಭ ಆಯ್ಕೆಯಾಗಿದ್ದಾರೆ.

ಹೈದರಾಬಾದ್ ಮೂಲದ ಅಧಿಕಾರಿಯಾದ ರತ್ನಪ್ರಭಾ 1981 ರ ಐಎಎಸ್ ಬ್ಯಾಚ್​ನ ಅಧಿಕಾರಿ.  ರತ್ನಪ್ರಭಾ ಬೇರೆ ಬೇರೆ ಕ್ಷೇತ್ರಗಳಲ್ಲಿ  36 ವರ್ಷಗಳ ಅಪಾರ ಅನುಭವ ಹೊಂದಿದ್ದಾರೆ. ಇವರ ತಂದೆ ಸಿವಿಲ್ ಸೇವೆಯಲ್ಲಿದ್ದವರು. ತಾಯಿ ವೈದ್ಯೆ. ಅಣ್ಣ  ಪ್ಲಾಸ್ಟಿಕ್ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೊಬ್ಬ ಸಹೋದರ ಕೂಡಾ ನಾಗರೀಕ ಸೇವೆಯಲ್ಲಿದ್ದಾರೆ. ಕೌಟುಂಬಿಕ ವಾತಾವರಣ ಇವರು ಐಎಎಸ್ ಮಾಡಲು ಸ್ಪೂರ್ತಿ ನೀಡಿತು. ಪತಿ ಕೂಡ ಆಂಧ್ರಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

1981 ರಲ್ಲಿ ಇವರು ಅಸಿಸ್ಟೆಂಟ್ ಕಮಿಷನರ್ ಆಗಿ ಬೀದರ್;ನಿಂದ ತಮ್ಮ ಮೊದಲ ವೃತ್ತಿಯನ್ನು ಆರಂಭಿಸಿದರು. ಪ್ರಸ್ತುತ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದಕ್ಕೂ ಮುನ್ನ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.  ಇವರ ಪಾರದರ್ಶಕ ಆಡಳಿತದಿಂದ ಕೈಗಾರಿಕಾ ವಲಯದಲ್ಲಿ ಭಾರೀ ಸುಧಾರಣೆ ಕಂಡು ಬಂದಿತ್ತು.

1999 ಮತ್ತು 2000 ದಲ್ಲಿ ಅಮೇರಿಕನ್ ಬಯೋಗ್ರಾಫಿಕಲ್ ಇನ್ಸಿಟ್ಯೂಷನ್'ನಿಂದ  ವರ್ಷದ ಮಹಿಳೆ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ.

click me!