
ಬೆಂಗಳೂರು(ಎ.10): ಭಾರೀ ಸದ್ದು ಮಾಡಿದ್ದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಮತ್ತೆ ಶುರುವಾಗಲಿದೆಯಾ? ಇವತ್ತಿನ ಸಿಎಂ ಜೊತೆಗಿನ ಸಭೆ ವಿಫಲವಾದರೆ ನಾವು ಮತ್ತೆ ಬೀದಿಗೆ ಬರುತ್ತೇವೆ ಎನ್ನುವ ಸೂಚನೆಯನ್ನು ಅಂಗನವಾಡಿ ಕಾರ್ಯಕರ್ತೆಯರು ನೀಡಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ದೇಶದಾದ್ಯಂತ ಗಮನ ಸೆಳೆದಿದ್ದರು . ಉಪ ಚುನಾವಣೆ ಮುಗಿಯುತ್ತಿದ್ದಂತೆ ಬೇಡಿಕೆ ಈಡೇರಿಸುವ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದರು . ಈಗ ಚುನಾವಣೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಇವತ್ತು ವಿಧಾನಸೌಧದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಸಂಬಂಧ ಸಿಎಂ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಿ ಐ ಟಿ ಯು ಮುಖ್ಯಸ್ಥೆ ವರಲಕ್ಷ್ಮಿ ಸೇರಿದಂತೆ ಕೆಲ ಸಂಘಟನೆಗಳು ಭಾಗಿಯಾಗಲಿವೆ.
ಇಂದು ಬೆಳಗ್ಗೆ 10 ಗಂಟೆಗೆ ವಿಧಾನ ಸೌಧದಲ್ಲಿ ಸಭೆ ನಡೆಯಲಿದೆ. ಗುಂಡ್ಲು ಪೇಟೆ ಮತ್ತು ನಂಜನಗೂಡು ಉಪಚುನಾವಣೆ ಹಿನ್ನಲೆಯಲ್ಲಿ ಸಭೆ ಮುಂದುಡಲಾಗಿತ್ತು. ಹೀಗಾಗಿ ಎಲ್ಲರ ಚಿತ್ತ ಇಂದಿನ ಸಭೆಯ ಮೇಲೆ ನೆಟ್ಟಿದೆ. ಒಂದು ವೇಳೆ ಸಭೆ ವಿಫಲವಾದ್ರೆ ನಾವು ಮತ್ತೆ ಬೀದಿಗಿಳಯಬೇಕಾಗತ್ತೆ. ಈ ಸಂಬಂಧ ಈಗಾಗಲೇ ಧರಣಿ ನಡೆಸಲು ಪೊಲೀಸರ ಅನುಮತಿ ಕೇಳಿದ್ದಾಗಿ CITU ಮುಖ್ಯಸ್ಥೆ ವರಲಕ್ಷೀ ಸುವರ್ಣ ನ್ಯೂಸ್'ಗೆ ಮಾಹಿತಿ ನೀಡಿದ್ದಾರೆ.
ಒಂದುವಾರಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ್ದ ಕಾರ್ಯಕರ್ತೆಯರು , ಕನಿಷ್ಠ ವೇತನ ಹೆಚ್ಚಳ, ಮತ್ತು ಕೆಲಸದ ಸಮಯ ಕಡಿತಗೊಳಿಸುವಂತೆ ಆಗ್ರಹಿಸಿದ್ದರು. ಆದರೂ ವೇತನ ಹೆಚ್ಚಳದ ಬಗ್ಗೆ ಅಂತಿಮ ತಿರ್ಮಾನವನ್ನ ಸರ್ಕಾರ ತೆಗೆದುಕೊಂಡಿರಲಿಲ್ಲ. ಹೀಗಾಗಿ ಇಂದು ಮುಖ್ಯಮಂತ್ರಿ ಇನ್ನೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಆದ್ರೆ ಸರ್ಕಾರ ಈವರೆಗೂ ಯಾವುದೇ ಚಿಂತನೆ ನಡೆಸಿಲ್ಲ. ಇಂದಿನ ಸಭೆ ಬಳಿಕ ವೇತನ ಹೆಚ್ಚಳವೋ ಅಥವಾ ಮತ್ತೆ ಧರಣಿಯೋ ತಿಳಿಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.