
ಬೆಂಗಳೂರು(ಜು.5): ಸಿಎಂ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದಾರೆ. ಇಲಾಖಾವಾರು ಅನುಮೋದನೆಯ ಕುರಿತು ಸಿಎಂ ಸದನಕ್ಕೆ ವಿವರವಾದ ಮಾಹಿತಿ ನೀಡುತ್ತಿದ್ದಾರೆ.
ಈಗಾಗಲೇ ಸಮಾಜ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆಗಳ ಆರ್ಥಿಕ ರಹದಾರಿಗೆ ನೀಲನಕ್ಷೆ ಸಿದ್ದಪಡಿಸಲಾಗಿದೆ. ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಿಎಂ ನೀಡಿದ ಅನುದಾನದತ್ತ ಗಮನಹರಿಸುವುದಾದರೆ..
ಬಿಪಿಎಲ್ ಗರ್ಭಿಣಿಯರಿಗೆ ಮಾತೃಪೂರ್ಣ ಯೋಜನೆಯಡಿಯಲ್ಲಿ 1 ಸಾವಿರ ರೂ ಮಾಸಿಕ ಭತ್ಯೆಯನ್ನು ಸಿಎಂ ಘೋಷಿಸಿದ್ದಾರೆ. ಅಲ್ಲದೇ ಆಧಾರ ಸ್ವಯಂ ಯೋಜನೆ ಘಟಕ ವೆಚ್ಚ ಹೆಚ್ಚಳಕ್ಕೆ ಸಿಎಂ ಅಸ್ತು ಎಂದಿದ್ದಾರೆ. ಈ ಹಿಂದೆ ಇದ್ದ 35 ಸಾವಿರ ರೂ. ವೆಚ್ಚವನ್ನು 1 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.
ಇಷ್ಟೇ ಅಲ್ಲದೇ ಶೇಕಡಾ 50ರಷ್ಟು ಬ್ಯಾಂಕ್ ಸಾಲ ಮತ್ತು ಶೇಕಡಾ 50 ಸಹಾಯಧನ, ವಿಕಲಚೇತನ ವ್ಯಕ್ತಿಗಳ ಸಮೀಕ್ಷೆಗೆ 5 ಕೋಟಿ ಅನುದಾನ, ಜಿಲ್ಲೆಯ ಪ್ರತಿ ಉಪವಿಭಾಗಗಳಿಗೂ ವೃದ್ಧಾಶ್ರಮ ಸ್ಥಾಪನೆ ಗುರಿ ಮುಂತಾದ ಯೋಜನೆಗಳನ್ನು ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.