6 ಬೋಗಿ ಮೆಟ್ರೋಗೆ ಶುಕ್ರವಾರ ಚಾಲನೆ

First Published Jun 20, 2018, 10:43 AM IST
Highlights

ಬಹುನಿರೀಕ್ಷೆಯ ಆರು ಬೋಗಿಯ ಮೆಟ್ರೋ ರೈಲು ವಾಣಿಜ್ಯ ಸಂಚಾರಕ್ಕೆ ಶುಕ್ರವಾರ ಅಧಿಕೃತ ಚಾಲನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಸಿದ್ಧತೆ ನಡೆಸಿದೆ. ಗುರುವಾರ ಸಂಜೆ ಆರು ಬೋಗಿಯ ಮೆಟ್ರೋ ರೈಲು ಪ್ರಾಯೋಗಿಕವಾಗಿ ಸಂಚರಿಸಲಿದೆ. ನಂತರ ಶುಕ್ರವಾರ (ಜೂ.22) ಅಧಿಕೃತ ಚಾಲನೆ ನೀಡಲಾಗುವುದು.

ಬೆಂಗಳೂರು (ಜೂ. 20): ಬಹುನಿರೀಕ್ಷೆಯ ಆರು ಬೋಗಿಯ ಮೆಟ್ರೋ ರೈಲು ವಾಣಿಜ್ಯ ಸಂಚಾರಕ್ಕೆ ಶುಕ್ರವಾರ ಅಧಿಕೃತ ಚಾಲನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಸಿದ್ಧತೆ ನಡೆಸಿದೆ. ಗುರುವಾರ ಸಂಜೆ ಆರು ಬೋಗಿಯ ಮೆಟ್ರೋ ರೈಲು ಪ್ರಾಯೋಗಿಕವಾಗಿ ಸಂಚರಿಸಲಿದೆ. ನಂತರ ಶುಕ್ರವಾರ (ಜೂ.22) ಅಧಿಕೃತ ಚಾಲನೆ ನೀಡಲಾಗುವುದು.

ಬೈಯಪ್ಪನಹಳ್ಳಿಯ ಮೆಟ್ರೋ ನಿಲ್ದಾಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರಿಸುವರು ಹಾಗೂ ಬೈಯಪ್ಪನಹಳ್ಳಿಯಿಂದ ಮೆಜೆಸ್ಟಿಕ್‌ವರೆಗೆ ಮೆಟ್ರೊದಲ್ಲಿ ಪ್ರಯಾಣಿಸಲಿದ್ದಾರೆ ಎಂದು
ಬಿಎಂಆರ್‌ಸಿಎಲ್ ವ್ಯವಸ್ಥಾಪಕ  ನಿರ್ದೇಶಕ ಮಹೇಂದ್ರಜೈನ್ ಹೇಳಿದ್ದಾರೆ.

ಮೊದಲ ಹಂತದಲ್ಲಿ  ಬೈಯಪ್ಪನಹಳ್ಳಿಯಿಂದ ವಿಜಯನಗರ ಮಾರ್ಗವಾಗಿ ನಾಯಂಡಹಳ್ಳಿವರೆಗೆ ಆರು ಬೋಗಿಯ ಮೆಟ್ರೊ ರೈಲು ಸಂಚರಿಸಲಿದೆ. ಬಿಇಎಂಎಲ್ ಸಂಸ್ಥೆಯು ಜುಲೈನಿಂದ ಪ್ರತಿ ತಿಂಗಳು 3 ಬೋಗಿಗಳ ೪ ಸೆಟ್‌ಗಳನ್ನು ಸಂಸ್ಥೆಗೆ ಹಸ್ತಾಂತರಿಸಲಿದೆ. ಆದ್ದರಿಂದ ಆಗಸ್ಟ್ ನಂತರ 6 ಬೋಗಿಯ ರೈಲುಗಳ ಸಂಖ್ಯೆ ಹೆಚ್ಚಳ ಮಾಡಲಾಗುವುದು. ಒಮ್ಮೆ  6  ಬೋಗಿಯ ರೈಲು ಯಶಸ್ವಿ ಸಂಚಾರ ನಡೆಸಿದ ನಂತರ ಉಳಿದ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸುವುದು ಕಷ್ಟವಾಗಲಾರದು. ಮೆಟ್ರೋ ಪ್ರಯಾಣಿಕರು ಇದರ ಲಾಭ ಪಡೆಯಲಿದ್ದಾರೆ. ಜತೆಗೆ ಬೆಂಗಳೂರು ಮಹಾನಗರದ ಟ್ರಾಫಿಕ್ ಸಮಸ್ಯೆಯಲ್ಲೂ ಸುಧಾರಣೆಗೆ ಇದು ಸಹಕಾರಿಯಾಗಲಿದೆ ಎಂದು ಜೈನ್ ತಿಳಿಸಿದ್ದಾರೆ.

 

click me!