ಜೆಡಿಎಸ್ ನೊಂದಿಗೆ ಮೈತ್ರಿ ಬೆಳೆಸಿ ಮತ್ತೆ ಸರ್ಕಾರ ರಚಿಸುತ್ತಾ ಬಿಜೆಪಿ..?

First Published Jul 5, 2018, 7:52 AM IST
Highlights

ಸಮ್ಮಿಶ್ರ ಸರ್ಕಾರದ ಮದುವೆಯಲ್ಲಿ ತಾಳಿ ಕಟ್ಟಿಆಗಿದೆ. ಸಂಸಾರ ಆರಂಭವಾಗಿದೆ. ಮತ್ತೆ ವಧುವನ್ನು ಹೊತ್ತುಕೊಂಡು ಹೋಗುವ ಪ್ರಯತ್ನ ಮಾಡಬೇಡಿ. ಕನಿಷ್ಠ ಒಂದು ವರ್ಷವಾದರೂ ಸಂಸಾರ ನಡೆಸಲಿ ಎಂದು ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ ಹಾಸ್ಯ ಚಟಾಕಿ ಹಾರಿಸಿದರು.

ವಿಧಾನ ಪರಿಷತ್‌ :  ಸಮ್ಮಿಶ್ರ ಸರ್ಕಾರದ ಮದುವೆಯಲ್ಲಿ ತಾಳಿ ಕಟ್ಟಿಆಗಿದೆ. ಸಂಸಾರ ಆರಂಭವಾಗಿದೆ. ಮತ್ತೆ ವಧುವನ್ನು ಹೊತ್ತುಕೊಂಡು ಹೋಗುವ ಪ್ರಯತ್ನ ಮಾಡಬೇಡಿ. ಕನಿಷ್ಠ ಒಂದು ವರ್ಷವಾದರೂ ಸಂಸಾರ ನಡೆಸಲಿ ಎಂದು ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ ಹಾಸ್ಯ ಚಟಾಕಿ ಹಾರಿಸಿದರು.

ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಮದುವೆಗೂ ಮೊದಲು ಬಿಜೆಪಿಯವರು ಹೊತ್ತುಕೊಂಡು ಹೋಗುವ ಪ್ರಯತ್ನ ಮಾಡಿದರೂ ಕೊನೆಗೂ ಸಿಗಲಿಲ್ಲ. ಮತ್ತೆ ಪ್ರಯತ್ನ ಮಾಡಬೇಡಿ. ಐದು ವರ್ಷ ಆಡಳಿತ ನಡೆಸಬೇಕು. ಚುನಾವಣೆಗೆ ಹೋದರೆ ಯಾರೊಬ್ಬರ ಬಳಿಯೂ ಹಣವಿಲ್ಲ. ಕನಿಷ್ಠ ಒಂದು ಚುನಾವಣೆಗೆ 10 ಕೋಟಿ ರು. ದುಡ್ಡು ಬೇಕು. ಆದ್ದರಿಂದ ಕನಿಷ್ಠ 1 ವರ್ಷವಾದ್ರೂ ಆಡಳಿತ ನಡೆಸಲು ಬಿಡಿ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದಾಗ ಸದನದಲ್ಲಿ ನಗು ತುಂಬಿಕೊಂಡಿತು.

ಹಿಂದಿನ ಐಎಎಸ್‌ ಅಧಿಕಾರಿಗಳು ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಇಂದಿನವರ ಬಗ್ಗೆ ಏನು ಹೇಳುವುದೋ ಗೊತ್ತಿಲ್ಲ. ಸರ್ಕಾರ ಸುಸೂತ್ರವಾಗಿ ನಡೆಯಬೇಕಾದರೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಅಂಕುಶ ಹಾಕಬೇಕಿದೆ. ಅಧಿಕಾರಿಗಳ ಸೇವಾ ದಾಖಲೆಗಳನ್ನು ಗಮನಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

click me!