ಸಿಎಂ ಇಬ್ರಾಹಿಂ- ಪರಮೇಶ್ವರ್’ಗಿಲ್ಲ ಟಿಕೆಟ್?

Published : Mar 14, 2018, 01:33 PM ISTUpdated : Apr 11, 2018, 12:48 PM IST
ಸಿಎಂ ಇಬ್ರಾಹಿಂ- ಪರಮೇಶ್ವರ್’ಗಿಲ್ಲ ಟಿಕೆಟ್?

ಸಾರಾಂಶ

ವಿಧಾನಸಭಾ ಚುನಾವಣೆಗೆ ಕೈ ಪಾಳಯದಿಂದ ಭರ್ಜರಿ ತಯಾರಿ ನಡೆಯುತ್ತಿದೆ. ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ರಾಜ್ಯ ಕಾಂಗ್ರೆಸ್​​ ಚುನಾವಣಾ ಸಮಿತಿ ಸಭೆ ನಡೆಯುತ್ತಿದ್ದು,  ಚುನಾವಣಾ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ.  

ಬೆಂಗಳೂರು (ಮಾ. 14):  ವಿಧಾನಸಭಾ ಚುನಾವಣೆಗೆ ಕೈ ಪಾಳಯದಿಂದ ಭರ್ಜರಿ ತಯಾರಿ ನಡೆಯುತ್ತಿದೆ. ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ರಾಜ್ಯ ಕಾಂಗ್ರೆಸ್​​ ಚುನಾವಣಾ ಸಮಿತಿ ಸಭೆ ನಡೆಯುತ್ತಿದ್ದು,  ಚುನಾವಣಾ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ.  

ಚುನಾವಣಾ ಸಮಿತಿಯಲ್ಲಿ 44 ಸದಸ್ಯರಿದ್ದು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ‌.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಈಗಾಗಲೇ 224 ಕ್ಷೇತ್ರಗಳಿಗೆ ಒಟ್ಟು 1570 ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಹಾಕಿದ್ದು ಅವುಗಳನ್ನು ಕಾಂಗ್ರೆಸ್ ಚುನಾವಣಾ ಸಮಿತಿ ಶಾರ್ಟ್ ಲೀಸ್ಟ್ ಮಾಡಲಿದೆ. ಪ್ರತೀ ಕ್ಷೇತ್ರಕ್ಕೆ ಎರಡು ಹೆಸರುಗಳನ್ನು ಅಂತಿಮಗೊಳಿಸಿ ಮುಂದಿನ ಹಂತಕ್ಕೆ ಕಾಂಗ್ರೆಸ್​ ಸಮಿತಿ ಪಟ್ಟಿ ಸಿದ್ದಪಡಿಸಲಿದೆ.


‘ಕೈ’ ಟಿಕೆಟ್​ ಮಾರ್ಗಸೂಚಿ..! 

ಕಳೆದ ಬಾರಿಯ ಚುನಾವಣೆಯಲ್ಲಿ 15 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತವರಿಗೆ ಟಿಕೇಟ್ ನೀಡಬೇಕೇ ಅಥವಾ ಬೇಡವೇ...?
ಟಿಕೇಟ್ ಕೊಡುವಾಗ ವಯಸ್ಸಿನ ಮಾನದಂಡ ಅನುಸರಿಸಬೇಕಾ ಅಥವಾ ಗೆಲ್ಲೋದೊಂದೇ ಮಾನದಂಡವಾಗಿ ಇಟ್ಟುಕೊಳ್ಳಬೇಕಾ...?
ಸಚ್ಛಾರಿತ್ರ್ಯವಂತರಿಗೆ ಮಾತ್ರ ಟಿಕೇಟ್ ಕೊಡಬೇಕಾ...? ಗಂಭೀರ ಸ್ವರೂಪದ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಟಿಕೇಟ್ ಕೊಡಬೇಕಾ...? ಅಥವಾ ಗೆಲ್ಲೋದಷ್ಟೇ ಮಾನದಂಡವಾ...?
ಒಂದು ಕುಟುಂಬದ ಒಬ್ಬರಿಗೆ ಮಾತ್ರ ಟಿಕೇಟ್ ನೀಡಬೇಕಾ ಅಥವಾ ಪ್ರಮುಖ ನಾಯಕರಿಗೆ ಈ ನಿಯಮದಿಂದ ವಿನಾಯಿತಿ ನೀಡಬೇಕಾ....?
ರಾಜ್ಯದಲ್ಲಿ ಈಗ ನಡೆಸಿರುವ ಸರ್ವೆಯಲ್ಲಿ ಗೆಲ್ಲುವ ಅಭ್ಯರ್ಥಿ ಅಂತ ಗುರುತಿಸಲ್ಪಟ್ಟಿರುವ ನಾಯಕ ಕಳೆದ ಬಾರಿ 25 ಸಾವಿರ ಮತಗಳ ಅಂತರದಿಂದ ಸೋತಿದ್ದರೆ, ಟಿಕೇಟ್ ನೀಡಬೇಕಾ ಅಥವಾ ಬೇಡವೇ...?
ಟಿಕೇಟ್ ನೀಡುವ ಸಂಪೂರ್ಣ ಜವಾಬ್ದಾರಿಯನ್ನು ಹೈಕಮಾಂಡ್ ಗೆ ಬಿಡಬೇಕೇ ಅಥವಾ ರಾಜ್ಯದಲ್ಲೊಂದು ಆಯ್ಕೆ ಸಮಿತಿ ರಚನೆಯಾಗಬೇಕೇ...? ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ. 
 

ಯಾರಿಗೆ ಸಿಗಲ್ಲ ಟಿಕೆಟ್?

ಮಾರ್ಗಸೂಚಿ ಜಾರಿಯಾದ್ರೆ ಕೆಪಿಸಿಸಿ ಅಧ್ಯಕ್ಷರಿಗೆ ಟಿಕೆಟ್​ ಇಲ್ಲ..?
18,155 ಮತಗಳಿಂದ ಸೋತಿರುವ ಡಾ. ಜಿ. ಪರಮೇಶ್ವರ್​ ಟಿಕೆಟ್ ಡೌಟು
56,041 ಮತಗಳಿಂದ ಸೋತಿರುವ ಸಿ.ಎಂ. ಇಬ್ರಾಹಿಂಗೆ ಟಿಕೆಟ್​ ಇಲ್ಲ..?
ದೊಡ್ಡವರಿಗಾಗಿ ಕಾಂಗ್ರೆಸ್​ ಮಾರ್ಗಸೂಚಿಯಲ್ಲಿ ಬದಲಾವಣೆ ಸಾಧ್ಯತೆ 
ಮಾರ್ಗಸೂಚಿ ಅಂತಿಮ ಪಡಿಸುವ ಸಲುವಾಗಿಯೇ ಇಂದಿನ ಸಭೆ 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌