
ಮಂಡ್ಯ : ಮಂಡ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಲ್ಲಿ ಮೀಸಲಿಟ್ಟ ಅನುದಾನವನ್ನು ಹಿಂಪಡೆಯುವುದು ಕೇವಲ ಗಾಸಿಪ್, ಇಂತಹ ಗಾಸಿಪ್ ಗಳಿಗೆ ಅವಕಾಶ ಕೊಡಬೇಡಿ ಎಂದು ಸಚಿವ ಪುಟ್ಟರಾಜು ಹೇಳಿದರು.
ಇದುವರೆಗೆ ಜಿಲ್ಲೆಯ ಅಭಿವೃದ್ಧಿಗಾಗಿ ಕೊಟ್ಟ ಅನುದಾನಕ್ಕಿಂತ ಹೆಚ್ಚು ಅನುದಾನ ಕೊಡುತ್ತಾರೆ. ಕೆಲವರಿಗೆ ಗಾಸಿಪ್ ಹಬ್ಬಿಸುವುದೇ ಕೆಲಸವಾಗಿದೆ. ಈಗಾಗಲೇ ಮುಖ್ಯಮಂತ್ರಿ ತಮ್ಮ ಕಾರ್ಯವೈಖರಿ ವೇಗ ಹೆಚ್ಚಿಸಿಕೊಂಡಿದ್ದಾರೆ. ಇನ್ನು ಮುಂದೆ ಸಿಎಂ ಕಾರ್ಯ ವೈಖರಿ ಬದಲಾಗಲಿದ್ದು, ಸಿಎಂ ಮಂಡ್ಯ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ಕೂಡ ಮರೆಯುವುದಿಲ್ಲ ಎಂದು ಪುಟ್ಟರಾಜು ಹೇಳಿದರು.
ಇದೇ ವೇಳೆ ದೇವೇಗೌಡರ ಕುಟುಂಬ ರಾಜಕೀಯ ನಿವೃತ್ತಿ ಪಡೆಯಲಿ ಎಂದಿದ್ದ ಸಂಸದೆ ಶೋಭಾ ಕರಂದ್ಲಾಜೆಗೆ ಸವಾಲು ಹಾಕಿದ ಪುಟ್ಟರಾಜು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಸವಾಲು ಹಾಕಿದ್ದಾರೆ. ಶಿಕಾರಿಪುರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು, ಮೊದಲು ಯಡಿಯೂರಪ್ಪಗೆ ರಾಜೀನಾಮೆ ಕೊಡಸಲಿ ಎಂದರು.
ಚುನಾವಣೆ ಮುಕ್ತಾಯವಾದ ಬಳಿಕವೂ ಕೂಡ ನಿಖಿಲ್ ಮಂಡ್ಯ ಜನತೆಯ ಜೊತೆಯಲ್ಲಿ ಸಂಪರ್ಕದಲ್ಲಿದ್ದು, ಅಮವಾಸ್ಯೆ ಮುಗಿಸಿ ಬರಲು ಕಾಯುತ್ತಿದ್ದರು. ಇನ್ನು ಮುಂದೆ ಇಲ್ಲಿ ಬಂದು ಜೊತೆಯಲ್ಲಿಯೇ ಇರಲಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.