ಜಾರಕಿಹೊಳಿ ಸಹೋದರರ ಅಸಮಾಧಾನ ತಣಿಸಲು ಸಿಎಂ ಮಾಸ್ಟರ್ ಪ್ಲಾನ್

By Web DeskFirst Published Sep 14, 2018, 8:22 AM IST
Highlights

ಜಾರಕಿಹೊಳಿ ಸಹೋದರರು ಹಾಗೂ ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಅಸಮಾಧಾನವನ್ನು ತಣಿಸಲು ಇದೀಗ ಸಿಎಂ ಕುಮಾರಸ್ವಾಮಿ ಮಧ್ಯ ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ಬೆಳಗಾವಿಯಿಂದಲೇ ಭಿನ್ನಮತ ಶಮನ ಮಾಡಲು ಮಾಸ್ಟರ್ ಪ್ಲಾನ್ ಹೆಣೆದಿದ್ದಾರೆ. 

ಬೆಳಗಾವಿ :  ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯಂತೆ ಇದ್ದ ಬಂಡಾಯವನ್ನು ಶಮನ ಮಾಡಲು ಇದೀಗ ಸ್ವತಃ ಸಿಎಂ ಕುಮಾರಸ್ವಾಮಿ ಅವರೇ ಮುಂದಾಗಿದ್ದಾರೆ. ಬೆಳಗಾವಿ ಮೂಲಕ ಶಮನ ಸೂತ್ರವನ್ನು ಸಿಎಂ ಕೈಗೆತ್ತಿಕೊಂಡು ತಂತ್ರ ಹೆಣೆದಿದ್ದಾರೆ. 

ಈ ಮೂಲಕ ಒಂದು ಏಟಿಗೆ  ಎರಡು ಹಕ್ಕಿಯನ್ನು ಹೊಡೆಯಲು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದು , ಉತ್ತರ ಕರ್ನಾಟಕದಲ್ಲಿ ಸಂಚಲನಕ್ಕೆ ಸಜ್ಜಾಗಿದ್ದಾರೆ. 

ದಶಕಗಳಿಂದ ಎದ್ದಿದ್ದ ಬೆಳಗಾವಿ ಜಿಲ್ಲೆ ವಿಭಜನೆ ಕೂಗಿಗೆ ಕುಮಾರಸ್ವಾಮಿ ಚಾಲನೆ ನೀಡಲಿದ್ದು, ಇದೇ  ಮೂಲಕ ಜಾರಕಿಹೊಳಿ ಸಹೋದರರು ಹಾಗೂ ರಾಜ್ಯ ರಾಜಕಾರಣದಲ್ಲಿ ಎದ್ದಿರುವ ಗಲಾಟೆ ತಣ್ಣಗಾಗಿಸಲು ಬಿಗ್ ಪ್ಲಾನ್ ಹೆಣೆದಿದ್ದಾರೆ.  ಇದೀಗ ಜಿಲ್ಲೆಯನ್ನು ಮೂರು ಭಾಗವಾಗಿ ವಿಭಜನೆ ಮಾಡುವತ್ತ  ಚಿಂತನೆ ನಡೆದಿದೆ.  

ಇನ್ನು ಈ ಬಗ್ಗೆ ಮೂರು ಪಕ್ಷಗಳಿಂದಲೂ ಕೂಡ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದ್ದು. ಬೆಳಗಾವಿಯನ್ನು ವಿಭಜನೆ ಮಾಡಲು ಸಚಿವರ ನೇತೃತ್ವದಲ್ಲಿ ಸಿಎಂ ಸಮಿತಿಯೊಂದನ್ನು ರಚನೆ ಮಾಡಲೂ ಕೂಡ ಈಗಾಗಲೇ ಚಿಂತನೆ ನಡೆಸಿದ್ದಾರೆ.

click me!