ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾಕ್ಕೂ ಸಿಎಂ ಒಪ್ಪಿಗೆ?

Published : Aug 09, 2018, 10:33 PM IST
ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾಕ್ಕೂ ಸಿಎಂ ಒಪ್ಪಿಗೆ?

ಸಾರಾಂಶ

ಸಹಕಾರಿ  ಬ್ಯಾಂಕ್ ಗಳ ಸಾಲ ಮನ್ನಾ ಮಾಡಿದ್ದ ಕುಮಾರಸ್ವಾಮಿ ಇದೀಗ ಗಣೇಶ ಹಬ್ಬಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲವನ್ನು ಮನ್ನಾ ಮಾಡಿ ಗಿಫ್ಟ್ ನೀಡಲಿದ್ದಾರೆಯೇ? ಗುರುವಾರದ ಅವರ ಮಾತುಗಳು ಇದಕ್ಕೆ ಹೌದು ಎನ್ನುತ್ತಿವೆ. ಹಾಗಾದರೆ ಕುಮಾರಸ್ವಾಮಿ ಏನು ಹೇಳಿದರು.. ನೋಡಿಕೊಂಡು ಬನ್ನಿ.

ಬೆಂಗಳೂರು[ಆ.9]  ಮೈತ್ರಿ ಸರ್ಕಾರದಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡಿದ್ದ , ಸಿಎಂ ಕುಮಾರಸ್ವಾಮಿ ಇದೀಗ ಕರ್ನಾಟಕದ ಜನರಿಗೆ ಸಿಹಿ ಸುದ್ದಿ ಕೊಡ್ತೇನೆ ಎಂದಿದ್ದಾರೆ. ಆದರೆ ಅದೇನು ಅನ್ನೋದರ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಹಕಾರಿ ಕ್ಷೇತ್ರದ ಸಾಲಮನ್ನಾಗೆ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ದೊರೆತಿದ್ದು, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಅಧಿಕೃತ ಆದೇಶ ಹೊರಡಿಸೋದಾಗಿ ಸಿಎಂ ಹೇಳಿದ್ದಾರೆ.

ಮೈತ್ರಿ ಸರ್ಕಾರದ ಬಜೆಟ್ ನಲ್ಲಿ ರೈತರ ಸಾಲಮನ್ನಾ ಘೋಷಿಸಿದ್ದ ಸಿಎಂ ಕುಮಾರಸ್ವಾಮಿ ಇದೀಗ ಸಾಲಮನ್ನಾ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ.. ಸಹಕಾರಿ ಕ್ಷೇತ್ರದಲ್ಲಿಯ ರೈತರ ಬೆಳೆ ಸಾಲಮನ್ನಾಗಿ ಕ್ಯಾಬಿನೆಟ್ ಅನುಮೋದನೆ ನೀಡಿದೆ.  ಸಹಕಾರಿ ಕ್ಷೇತ್ರದ ಬೆಳೆ ಸಾಲಮನ್ನಾಗೆ ಕೆಲಸ ಷರತ್ತುಗಳನ್ನ ಹಾಕಲಾಗಿದ್ದು, ಕ್ಯಾಬಿನೆಟ್ ಒಪ್ಪಿಗೆಯ ಪ್ರಕಾರ ಯಾರಿಗೆ ಸಾಲಮನ್ನಾ ಆಗಲಿದೆ.. ಯಾರು ವಂಚಿತರಾಗಲಿದ್ದಾರೆ. ಎನ್ನುವುದಕ್ಕೂ ಸ್ಪಷ್ಟನೆ ನೀಡಿದ್ದಾರೆ.

ಸಹಕಾರಿ ಕ್ಷೇತ್ರದ 10734 ಕೋಟಿ ಸಾಲದಲ್ಲಿ 9448 ಕೋಟಿ ಬೆಳೆ ಸಾಲ ಮನ್ನಾ ಆಗಲಿದೆ.  ಜುಲೈ 10, 2018 ರವರೆಗೆ ಚಾಲ್ತಿ ಸಾಲ ಹೊಂದಿರುವವರಿಗೂ ಮನ್ನಾ ಲಾಭ ಸಿಗಲಿದೆ.  ಒಂದು ಕುಟುಂಬದಲ್ಲಿ ಎಷ್ಟೇ ಸದಸ್ಯರು ಸಾಲ ಪಡೆದಿದ್ದರೂ ಮನ್ನಾ ಆಗಲಿದೆ..ಒಂದೇ ಸಹಕಾರಿ ಸಂಘ ಅಥವಾ ಸಂಸ್ಥೆಯಲ್ಲಿ ಮಾತ್ರ ಸಾಲಮನ್ನಾ ಸೌಲಭ್ಯ ಸಿಗಲಿದೆ. 

ಇನ್ನೇನು ನಿಬಂಧನಗೆಗಳಿವೆ?

* ಸಾಲ ಪಡೆದು ರೈತರು ಮೃತಪಟ್ಟಿದ್ದರು, ವಾರಸುದಾರರಿಗೆ ಸಾಲಮನ್ನಾ ಲಾಭ ದೊರೆಯಲಿದೆ

* ರೈತರು ಸಾಲ ಮರುಪಾವತಿ ಗಡುವು ದಿನಾಂಕಕ್ಕೆ ಈ ಯೋಜನೆ ಅನ್ವಯವಾಗಲಿದೆ.

* 10-07-2018 ಕ್ಕೆ ಚಾಲ್ತಿ ಸಾಲ ಹೊಂದಿದ್ದು,  ಬಳಿಕ ಮರುಪಾವತಿ ಮಾಡಿದ್ದರೆ, ಅಂಥಹ ರೈತರ ಖಾತೆಗೆ ಒಂದು ಲಕ್ಷ ಜಮಾ..

* ಸಾಲಮನ್ನಾ ಆಗುವ ಅನುದಾನ  ಡಿಬಿಟಿ ಮೂಲಕ ರೈತರ ಉಳಿತಾಯ ಖಾತೆಗೆ ಬಿಡುಗಡೆ..

* ಸರ್ಕಾರಿ ಅಥವಾ ಸಹಕಾರಿ ಕ್ಷೇತ್ರದಲ್ಲಿ 20 ಸಾವಿರ ವೇತನ ಅಥಾ ಪಿಂಚಿಣಿ ಹೊಂದಿದ್ದ ರೈತರಿಗೆ ಮನ್ನಾ ಇಲ್ಲ

* ಮೂರು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ ರೈತರಿಗೆ ಸಾಲಮನ್ನಾ ಇಲ್ಲ

* ಕೃಷಿ ಉತ್ಪನ್ನ, ಚಿನ್ನಾಭರಣ, ಅಡವಿಟ್ಟು ಪಡೆದ ಸಾಲ, ಪಶುಭಾಗ್ಯ, ಮೀನುಗಾರಿಕೆ, ಸ್ವಸಹಾಯ ಗುಂಪುಗಳಿಗೆ ನೀಡಿದ ಬೆಳೆ ಸಾಲಮನ್ನಾ ಇಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?
ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?