ಸಿಎಂ ಕುಮಾರಸ್ವಾಮಿ ಜನಪ್ರಿಯ ಕಾರ್ಯಕ್ರಮ ಜನತಾದರ್ಶನ ಬಂದ್

First Published Jun 11, 2018, 9:55 PM IST
Highlights

ನೂತನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಜನಪ್ರಿಯ ಕಾರ್ಯಕ್ರಮ ಜನತಾದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಒಂದೇ ತಿಂಗಳಿನಲ್ಲಿ ಜನತಾದರ್ಶನ ಕಾರ್ಯಕ್ರಮವನ್ನ ಸ್ಥಗಿತಗೊಳಿಸಿದ್ದೇಕೆ? ಇಲ್ಲಿದೆ ವಿವಿರ.

ಬೆಂಗಳೂರು(ಜೂನ್.11):  ಕರ್ನಾಟಕದ ನೂತನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಜನಪ್ರಿಯ ಕಾರ್ಯಕ್ರಮ ಜನತಾದರ್ಶನಕ್ಕೆ ಬ್ರೇಕ್ ಬಿದ್ದಿದೆ. ಬಜೆಟ್ ಮಂಡನೆಯಿಂದಾಗಿ ಜನತಾದರ್ಶನ ಕಾರ್ಯಕ್ರಮವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸೋದಾಗಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

ಪತ್ರಿಕಾ ಪ್ರಕಟಣೆ
--
ಬಜೆಟ್ ಮಂಡನೆ ನಿಮಿತ್ತ
ಜನತಾ ದರ್ಶನ ಮುಂದೂಡಿಕೆ
--
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಯವ್ಯಯ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕಾಗಿರುವುದರಿಂದ ಬಜೆಟ್ ಅಧಿವೇಶನ ಮುಕ್ತಾಯಗೊಳ್ಳುವವರೆಗೆ ಜನತಾ ದರ್ಶನ ಮತ್ತು ಸಾರ್ವಜನಿಕರ ಭೇಟಿಯನ್ನು ಮುಂದೂಡಲಾಗಿದೆ.

— CM of Karnataka (@CMofKarnataka)

 

ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಆಯವ್ಯದಲ್ಲಿ ಪಾಲ್ಗೊಳ್ಳೋ ಕಾರಣದಿಂದ ಜನತಾದರ್ಶನ ಹಾಗೂ ಸಾರ್ವಜನಿಕರ ಭೇಟಿಯನ್ನ ಮುಂದೂಡಲಾಗಿದೆ.  2006ರಲ್ಲಿ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ  ವೇಳೆ ಆರಂಭಿಸಿದ್ದ ಜನತಾ ದರ್ಶನ ಕಾರ್ಯಕ್ರಮವನ್ನ ಇದೀಗ ಮತ್ತೆ ಆರಂಭಿಸಿದ್ದರು. ಆದರೆ ಜನಪ್ರಿಯ ಕಾರ್ಯಕ್ರಮಕ್ಕೆ ಮತ್ತೆ ಬ್ರೇಕ್ ಹಾಕಲಾಗಿದೆ.

click me!