
ಚಿಕ್ಕಬಳ್ಳಾಪುರ(ಅ.24): ತನ್ನ ಅನನ್ಯ ಸೌಂಧರ್ಯದಿಂದಲೇ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಮನಮೋಹಕ ಸ್ಥಳ ನಂದಿ ಬೆಟ್ಟ. ಮೋಡಗಳ ಕಲರವ. ವೀವ್ ಪಾಯಿಂಟ್.. ಟಿಪ್ಪು ಡ್ರಾಪ್ ಎಂಬ ಹೆಸರುಗಳು ಕೇಳಿದ ತಕ್ಷಣ ನಮಗೆ ನೆನಪಾಗೋದು ನಂದಿಗಿರಿಧಾಮ. ಕರ್ನಾಟಕದ ಊಟಿ ಎಂದೇ ಇದು ಪ್ರಸಿದ್ಧಿ ಪಡೆದಿದೆ. ಹೀಗಾಗಿ ಇಲ್ಲಿಗೆ ವಿಕೇಂಡ್ ನಲ್ಲಿ ಸಾವಿರಾರು ಪ್ರವಾಸಿಗರು ಬರ್ತಾರೆ. ಬೆಂಗಳೂರಿನಿಂದ ಕೇವಲ 60 ಕೀಮಿ ಕ್ರಮಿಸಿದರೆ ಸಾಕು ಇಂತಹ ಮನಮೋಹಕ ರಮಣೀಯ ದೃಶ್ಯಗಳನ್ನು ಕಾಣಬಹುದಾಗಿದೆ.
CLICK HERE.. ಪಪ್ಪಾ ಜೀವನ ಎದುರಿಸಲು ಕಷ್ಟವಾಗುತ್ತಿದೆ.. ಡೆತ್`ನೋಟ್ ಬರೆದಿಟ್ಟು ಎಂಟೆಕ್ ವಿದ್ಯಾರ್ಥಿನಿ ಆತ್ಮಹತ್ಯೆ
ನಂದಿ ಬೆಟ್ಟ ಪ್ರೇಮಿಗಳ ಹಾಟ್ ಸ್ಪಾಟ್ ಆಗಿದೆ. ವಿಕೇಂಡ್ ಬಂದ್ರೆ ಸಾಕು ಸಾವಿರಾರು ಜನರು ಇಲ್ಲಿಗೆ ಬರ್ತಾರೆ. ಇದರಲ್ಲಿ ಬಹುತೇಕರು ಪ್ರೇಮಿಗಳು, ಯುವ ಜೋಡಿಗಳು. ನಂದಿ ಗಿರಿಧಾಮದಲ್ಲಿ ಪ್ರೇಮಿಗಳು, ಯುವ ಜೋಡಿಗಳು ರೊಮ್ಯಾನ್ಸ್ ಮಾಡುವ ದೃಶ್ಯ ಅಲ್ಲಲ್ಲಿ ಕಂಡಿ ಬರುತ್ತದೆ. ಆದರೆ ಈಗ ರೊಮ್ಯಾನ್ಸ್ ಮಾಡುವಾಗ ಸ್ವಲ್ಪ ಜಾಗೃತವಾಗಿರಬೇಕು. ಹಲವು ಅಕ್ರಮ ಚಟುವಟಿಕೆಗಳು, ಕಳವುಗಳು ನಡೆಯುತ್ತಿದ್ದ ಕಾರಣ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ತೊಟಗಾರಿಕೆ ಇಲಾಖೆ ಹಾಗೂ ಪ್ರವಾಸೋಧ್ಯಮ ಇಲಾಖೆಯು 24 ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ. ಪ್ರವಾಸೋಧ್ಯಮ ಇಲಾಖೆಯ ಈ ನಿರ್ಧಾರಕ್ಕೆ ಪ್ರವಾಸಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಸಿ ಟೀವಿ ಅಳವಡಿಕೆಯ ಕಾರಣದಿಂದ ರೊಮ್ಯಾನ್ಸ್ ಮಾಡುವ ಪ್ರೇಮಿಗಳು ಸ್ವಲ್ಪ ಜಾಗೃತವಾಗಿರಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.