
ಸೇಂಟ್ ಲೂಯಿಸ್(ಅ.10): ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಗಳ ಮುಖಾಮುಖಿ ಚರ್ಚೆಯಲ್ಲಿ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸತತ ಎರಡನೇ ಗೆಲುವು ಸಾಧಿಸಿದ್ದಾರೆ.
ತೀವ್ರ ಪೈಪೋಟಿ ನೀಡಿದ ರಿಪಬ್ಲಿಕನ್ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಈ ಚರ್ಚೆಯಲ್ಲಿ ಹಿಂದಿಗಿಂತಲೂ ಹೆಚ್ಚಿನ ಮತಗಳ ಮನ್ನಣೆ ಪಡೆದಿದ್ದಾರೆ. ಹಿಲರಿಗೆ ಶೇ.57 ಮತ್ತು ಟ್ರಂಪ್‍ಗೆ ಶೇ. 34ರಷ್ಟು ಮತಗಳು ಲಭಿಸಿವೆ ಎಂದು ಚರ್ಚೆಯ ಮತಗಳ ಮೇಲೆ ನಿಗಾ ವಹಿಸುವ ಮಾಧ್ಯಮಗಳು ಹೇಳಿವೆ.
ಟ್ರಂಪ್ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ ವೀಡಿಯೋ ಬಹಿರಂಗವಾದ ವಿವಾದವನ್ನು ಪ್ರಮುಖ ಅಸ್ತ್ರವನ್ನಾಗಿಟ್ಟುಕೊಂಡು ಹಿಲರಿ ವಾಗ್ದಾಳಿ ನಡೆಸಿದರು. ಹಿಲೆರಿ ಪತಿ, ಮಾಜಿ ಅಧ್ಯಕ್ಷ ಕ್ಲಿಂಟನ್ ರಾಸಲೀಲೆಗಳ ವಿಷಯವನ್ನು ಪ್ರಸ್ತಾಪಿಸಿ ಟ್ರಂಪ್ ತಿರುಗೇಟು ನೀಡಿದರು.
ಈ ಬಾರಿ ಚರ್ಚೆಯ ವಿಷಯ ವೈಯಕ್ತಿಕ ವೈಷಮ್ಯದ ವಿಷಯಗಳ ಬಿಸಿಬಿಸಿ ಸಂವಾದಕ್ಕೆ ದಾರಿ ಮಾಡಿಕೊಟ್ಟಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.