
ನವದೆಹಲಿ(ಡಿ. 08): ಪ್ರಮುಖ ಕೆಲ ಶಾಸನಗಳ ಮಂಡನೆ ಇರುವುದರಿಂದ ಡಿ. 9ರಿಂದ ಮೂರು ದಿನಗಳವರೆಗೆ ಪಕ್ಷದ ಎಲ್ಲಾ ಲೋಕಸಭಾ ಸದಸ್ಯರು ಉಪಸ್ಥಿತರಿರಬೇಕು ಎಂದು ಬಿಜೆಪಿ ವಿಪ್ ನೀಡಿದೆ.
ಡಿಸೆಂಬರ್ 9, ಸೋಮವಾರದಿಂದ ಡಿ. 11, ಮಂಗಳವಾರದವರೆಗೆ ಲೋಕಸಭೆಯಲ್ಲಿ ಬಹಳ ಮಹತ್ವದ ಕೆಲ ಶಾಸನಗಳ ಚರ್ಚೆಯಾಗಲಿದೆ. ಈ ವೇಳೆ ಹಾಜರಿದ್ದು ಸರ್ಕಾರದ ಜತೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಥ್ರೀ ಲೈನ್ ವಿಪ್ ಹೊರಡಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಲಿದ್ಧಾರೆ. ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಮಸೂದೆ ರೂಪಿಸಲಾಗಿದ್ದು ಪರ -ವಿರೋಧದ ಮಾತುಗಳು ಕೇಳಿ ಬಂದಿವೆ.
ವಿಪ್ ಗಳನ್ನು ಸಾಮಾನ್ಯವಾಗಿ ಮತದಾನದ ಸಮಯದಲ್ಲಿ ಮಾತ್ರ ಬಳಕೆಮಾಡಿಕೊಳ್ಳುತ್ತಾರೆ ಎಂಬ ಮಾತಿದೆ. ಆದರೆ ಸಭೆಗೆ ಹಾಜರಾಗುವಂತೆ ಕಟ್ಟಪ್ಪಣೆ ನೀಡಲು ಇದನ್ನು ಬಳಕೆ ಮಾಡಿಕೊಳ್ಳಬಹುದು.
ಕರ್ನಾಟಕದಲ್ಲಿ ಉಪಚುನಾವಣೆ ಫಲಿತಾಂಶ ಬರಲಿದ್ದರೆ ಅತ್ತ ಕೇಂದ್ರದಲ್ಲಿ ಮಸೂದೆ ಮಂಡನೆ. ಸೋಮವಾರ ಸುದ್ದಿಗಳ ಮಹಾಪೂರ ಇರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.