ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ರಾಜ್ಯದಲ್ಲಿ ವಿಧಾನಸಭಾ ಚುಪ ಚುನಾವಣೆ ನಡೆಯುತಿದ್ದು, ಚಿಂಚೋಳಿ ಕ್ಷೇತ್ರಕ್ಕೆ ಇದೀಗ ಬಿಜೆಪಿ ಟಿಕೆಟ್ ಫೈನಲ್ ಆಗಿದೆ.
ಕಲಬುರಗಿ : ಚಿಂಚೋಳಿ ಶಾಸಕ ಉಮೇಶ್ ಜಾದವ್ ಕಾಂಗ್ರೆಸ್ ತೊರೆದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿಯಿಂದ ಅಭ್ಯರ್ಥಿ ಫೈನಲ್ ಮಾಡಲಾಗಿದೆ.
ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಉಮೇಶ್ ಜಾಧವ್ ಪುತ್ರ ಡಾ. ಅವಿನಾಶ ಜಾಧವ್ ಗೆ ಬಿಜೆಪಿ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.
ಇನ್ನು ಈ ಕ್ಷೇತ್ರದಲ್ಲಿ ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಕೂಡ ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು, ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಇದೀಗ ಸಹೋದರನ ಪುತ್ರನಿಗೆ ಬಿಜೆಪಿ ಟಿಕೆಟ್ ದೊರೆತಿದೆ.
ಈ ಬಗ್ಗೆ ಸ್ವತಃ ರಾಮಚಂದ್ರ ಜಾಧವ್ ಪ್ರತಿಕ್ರಿಯಿಸಿದ್ದು, ನನಗೆ ಬಿಜೆಪಿ ಟಿಕೆಟ್ ಕೊಡಲು ಮುಂದಾಗಿತ್ತು. ಆದರೆ ಅನಾರೋಗ್ಯದ ಕಾರಣ ನಾನೇ ನಿರಾಕರಿಸಿದೆ. ಇದರಿಂದ ಅವಿನಾಶ್ ಗೆ ಟಿಕೆಟ್ ದೊರೆತಿದೆ. ಇದರಿಂದ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ.
ಹಿಂದೆ ನನ್ನ ಸಹೋದರ ಉಮೇಶ ಜಾಧವ್ ಪರ ಯಾವ ರೀತಿ ಕೆಲಸ ಮಾಡಿದ್ದೇನೋ ಅದಕ್ಕಿಂತ ಹೆಚ್ಚು ಪುತ್ರ ಅವಿನಾಶ್ ಪರ ಕೆಲಸ ಮಾಡುತ್ತೇನೆ ಎಂದು ರಾಮಚಂದ್ರ ಜಾಧವ್ ಹೇಳಿದ್ದಾರೆ.