ಕಾಶ್ಮೀರ ವಿವಾದ ಭಾರತ-ಪಾಕ್ ಬಗೆಹರಿಸಿಕೊಳ್ಳಲಿ: ಚೀನಾ!

By Web DeskFirst Published Jul 26, 2019, 9:51 PM IST
Highlights

ಭಾರತ-ಪಾಕಿಸ್ತಾನ ಕಾಶ್ಮೀರ ವಿವಾದ ಬಗೆಹರಿಸಿಕೊಳ್ಳಲಿ ಎಂದ ಚೀನಾ| ಡೋನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ಹೇಳಿಕೆಗೆ ಚೀನಾ ತಿರುಗೇಟು| ‘ಸಮಸ್ಯೆ ಬಗೆಹರಿಸಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಬೆಂಬಲ’| ‘ದಕ್ಷಿಣ ಏಷ್ಯಾದಲ್ಲಿ ಶಾಂತಿ ಹಾಗೂ ಸುಭದ್ರತೆ ನೆಲೆಸಲು ನೆರವು’|

ಬಿಜಿಂಗ್(ಜು.26): ಕಾಶ್ಮೀರ ವಿವಾದವನ್ನು ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಕೊಳ್ಳಿಸುವಂತೆ ಚೀನಾ ಸಲಹೆ ನೀಡಿದೆ. 

 ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ, ಚೀನಾದಿಂದ ಈ ಮಹತ್ವದ ಹೇಳಿಕೆ ಬಂದಿರುವುದು ವಿಶೇಷ.

ಕಾಶ್ಮೀರ ವಿವಾದವನ್ನು ಭಾರತ-ಪಾಕಿಸ್ತಾನ ರಾಷ್ಟ್ರಗಳೇ ಬಗೆಹರಿಸಿಕೊಳ್ಳಬೇಕಿದ್ದು, ಉಭಯ ದೇಶಗಳ ನಡುವಿನ ಸಂಬಂಧ ವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುವ ಅಮೆರಿಕವೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಬೆಂಬಲ ನೀಡುವುದಾಗಿ ಚೀನಾ ತಿಳಿಸಿದೆ.

ಕಾಶ್ಮೀರ ವಿವಾದವನ್ನು ಉಭಯ ದೇಶಗಳು ಶಾಂತಿಯುತವಾಗಿ ಬಗೆಹರಿಸಿಕೊಂಡು, ದಕ್ಷಿಣ ಏಷ್ಯಾದಲ್ಲಿ ಶಾಂತಿ ಹಾಗೂ ಸುಭದ್ರತೆ ನೆಲೆಸಲು ನೆರವಾಗಲಿದೆ ಎಂಬ ವಿಶ್ವಾಸವನ್ನು ಚೀನಾ ವ್ಯಕ್ತಪಡಿಸಿದೆ.

click me!