ಜೈ ಶ್ರೀರಾಮ್ ಹೇಳು: ಮುಸ್ಲಿಂ ಶಾಸಕನಿಗೆ ಬಿಜೆಪಿ ಸಚಿವರ ಒತ್ತಾಯ!

Published : Jul 26, 2019, 07:51 PM IST
ಜೈ ಶ್ರೀರಾಮ್ ಹೇಳು: ಮುಸ್ಲಿಂ ಶಾಸಕನಿಗೆ ಬಿಜೆಪಿ ಸಚಿವರ ಒತ್ತಾಯ!

ಸಾರಾಂಶ

ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಂ ಶಾಸಕನನ್ನು ಒತ್ತಾಯಿಸಿದ ಬಿಜೆಪಿ ಸಚಿವ| ಕಾಂಗ್ರೆಸ್ ಮುಸ್ಲಿಂ ಶಾಸಕನಿಗೆ ಘೋಷಣೆ ಕೂಗುವಂತೆ ಒತ್ತಾಯಿಸಿದ ಬಿಜೆಪಿ ಸಚಿವ| ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಮೇಲೆ ಒತ್ತಡ ಹೇರಿದ ಜಾರ್ಖಂಡ್ ಸಚಿವ ಸಿಪಿ ಸಿಂಗ್| ಸಾರ್ವಜನಿಕವಾಗಿ ಕೈ ಹಿಡಿದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ| ಜಾರ್ಖಂಡ್ ಸಚಿವರ ಒತ್ತಾಯಕ್ಕೆ ಮಣಿಯದ ಕಾಂಗ್ರೆಸ್ ಶಾಸಕ|

ರಾಂಚಿ(ಜು.26): ಇಷ್ಟು ದಿನ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಗುಂಪೊಂದು ನಿರ್ದಿಷ್ಟ ವ್ಯಕ್ತಿಯನ್ನು ಒತ್ತಾಯಿಸಿದ್ದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಆದರೆ ಇದೀಗ ಬಿಜೆಪಿ ಸಚಿವರೊಬ್ಬರೇ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಕಾಂಗ್ರೆಸ್’ನ ಮುಸ್ಲಿಂ ಶಾಸಕರೊಬ್ಬರನ್ನು ಒತ್ತಾಯಿಸಿದ ಘಟನೆ ನಡೆದಿದೆ.

ಜಾರ್ಖಂಡ್’ನ ನಗರಾಭಿವೃದ್ಧಿ, ವಸತಿ ಹಾಗೂ ಸಾರಿಗೆ ಸಚಿವ ಸಿಪಿ ಸಿಂಗ್ ಸಾರ್ವಜನಿಕವಾಗಿ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಅವರ ಕೈ ಹಿಡಿದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಅನ್ಸಾರಿ ಸೇರಿದಂತೆ ದೇಶದ ಎಲ್ಲಾ ಮುಸ್ಲಿಮರ ಪೂರ್ವಿಕರು ಹಿಂದೂಗಳಾಗಿದ್ದು, ಮುಸ್ಲಿಮರೂ ಕೂಡ ಜೈ ಶ್ರೀರಾಮ್ ಘೋಷಣೆ ಕೂಗಲೇಬೇಕು ಎಂದು ಸಿಪಿ ಸಿಂಗ್ ಒತ್ತಾಯಿಸಿದ್ದಾರೆ.

ಆದರೆ ಸಿಪಿ ಸಿಂಗ್ ಆದೇಶವನ್ನು ಧಿಕ್ಕರಿಸಿದ ಅನ್ಸಾರಿ, ನಿರುದ್ಯೋಗ, ವಿದ್ಯುತ್, ನೀರಿನ ಸಮಸ್ಯೆಗಳು ದೇಶವನ್ನು ಕಾಡುತ್ತಿದ್ದು, ಮೊದಲು ಇದನ್ನು ಬಗೆಹರಿಸುವತ್ತ ನಾವು ಗಮನಹರಿಸಬೇಕೆ ಹೊರತು ಇಂತಹ ಘೋಷಣೆಗಳ ಕುರಿತಲ್ಲ ಎಂದು ಪ್ರತಿಪಾದಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡಮಾನ್‌ ದ್ವೀಪದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ
ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!