ಮೈಸೂರಿನ ಹುಲ್ಲು ಹಾಸಿನ ಮೇಲೆ ಮೋದಿ, ಕ್ಸಿ ಜಿನ್‌ಪಿಂಗ್‌ ನಡಿಗೆ!

By Web DeskFirst Published Oct 6, 2019, 9:51 AM IST
Highlights

ಮೈಸೂರಿನ ಹುಲ್ಲು ಹಾಸಿನ ಮೇಲೆ ಮೋದಿ, ಕ್ಸಿ ಜಿನ್‌ಪಿಂಗ್‌ ನಡಿಗೆ| ಮಹಾಬಲಿಪುರಂನಲ್ಲಿ ಮುಂದಿನ ವಾರ ನಾಯಕರ ಭೇಟಿ| ಹಲ್ಲುಹಾಸಿನ ಕೊರತೆಯ ಕಾರಣ ಮೈಸೂರಿನಿಂದ ಆಮದು

ಕಾಂಚಿಪುರಂ[ಆ.06]: ಮುಂದಿನ ವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ದೇವಾಲಯ ನಗರಿ ಮಹಾಬಲಿಪುರಂ ಸಜ್ಜಾಗುತ್ತಿದೆ. ಮಹಾಬಲಿಪುರಂ ಸುತ್ತಮುತ್ತ ಗೌತಮ ಬುದ್ಧ ಮತ್ತು ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯಲ್ಲಿ ಬಳಸುವ ಎತ್ತುಗಳ ಮೂರ್ತಿಗಳನ್ನು ನಿಲ್ಲಿಸಲಾಗಿದೆ. ಇನ್ನೂ ವಿಶೇಷವೆಂದರೆ ಮೋದಿ ಹಾಗೂ ಕ್ಸಿಜಿನ್‌ಪಿಂಗ್‌ ಓಡಾಡುವ ಜಾಗದಲ್ಲಿ ಬೆಳೆಸಿದ ಹುಲ್ಲನ್ನು ಮೈಸೂರಿನಿಂದ ತರಿಸಿಕೊಳ್ಳಲಾಗಿದೆ.

ಮೋದಿ ಹಾಗೂ ಕ್ಸಿ ಜಿನ್‌ಪಿಂಗ್‌ ಮಹಾಬಲಿಪುರಂನ ಮೂರು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಲಿದ್ದಾರೆ. ಸ್ಮಾರಕದ ಸುತ್ತಮುತ್ತ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಿಂದ ಭಾರತೀಯ ಪುರಾತತ್ವ ಸಂಸ್ಥೆ ಮೈಸೂರಿನಿಂದ 2 ಲಕ್ಷ ಚದರ ಅಡಿ ಕೊರಿಯನ್‌ ಹುಲ್ಲು ಹಾಸನ್ನು ಮೈಸೂರಿನ ಸ್ಥಳದಿಂದ ಪೂರೈಸಿದೆ.

ಕ್ಸಿ ಜಿನ್‌ಪಿಂಗ್‌ ಹಾಗೂ ಮೋದಿ ಭೇಟಿ ನೀಡಲಿರುವ ಶೋರ್‌ ಟೆಂಪಲ್‌ (ಸಮುದ್ರ ದಂಡೆಯ ಮೇಲೆ ಇರುವ ದೇವಾಲಯ), ಪಾಂಡವರ ಐದು ರಥಗಳು ಮತ್ತು ಇಳಿಜಾರಿನಲ್ಲಿ ನಿಂತಿರುವ ಬೃಹತ್‌ ಕಲ್ಲುಬಂಡೆ (ಕೃಷ್ಣನ ಬೆಣ್ಣೆ ಮುದ್ದೆ)ಯ ಸುತ್ತಮುತ್ತ ವಿಶಾಲವಾದ ಮೈದಾನ ಇದ್ದು, ಅಲ್ಲಿ ಹಲ್ಲು ಹಾಸಿನ ಕೊರತೆ ಇರುವ ಕಾರಣಕ್ಕೆ ಭಾರತೀಯ ಪುರಾತತ್ವ ಇಲಾಖೆ ಬೇರೆಡೆಯಿಂದ ಹುಲ್ಲು ಹಾಸನ್ನು ತಂದು ಹೊದೆಸುತ್ತಿದೆ. ಜೊತೆಗೆ ಕುಂಡದಲ್ಲಿ ಗಿಡಗಳನ್ನು ತಂದು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!