ಕೆಂಪು ಚೀನಾದ ಕಣ್ಣು ಕೆಂಪು ಮಾಡಿದ ಹಾಂಕಾಂಗ್ ಜನತೆ| ಚೀನಿ ಸರ್ಕಾರದ ದಬ್ಬಾಳಿಕೆ ವಿರುದ್ಧ ಸಿಡಿದೆದ್ದ ಹಾಂಕಾಂಗ್| ಹಾಂಕಾಂಗ್ ಸ್ವಾಯತ್ತತೆಯ ಹೋರಾಟಕ್ಕಿದೆ ದಶಕಗಳ ಇತಿಹಾಸ| ಚೀನಾ ಅತಿಕ್ರಮಣದ ವಿರುದ್ಧ ಬಂಡೆದ್ದಿರುವ ಹಾಂಕಾಂಗ್ ಜನತೆ| ಕಳೆದೊಂದು ವಾರದಿಂದ ಪ್ರತಿಭಟನೆ ನಡೆಸುತ್ತಿರುವ ಲಕ್ಷಾಂತರ ಜನ| ಪ್ರತಿಭಟನೆ ಹತ್ತಿಕ್ಕಲು ಹಿಂಸಾತ್ಮಕ ಮಾರ್ಗ ಆಯ್ಕೆ ಮಾಡಿಕೊಂಡ ಚೀನಾ ಸರ್ಕಾರ| ಅಪಾರ ಪ್ರಮಾಣದ ಪೊಲೀಸ್, ಸೇನಾ ತುಕಡಿಯನ್ನು ನಗರಕ್ಕೆ ನುಗ್ಗಿಸಿದ ಸ್ಥಳೀಯ ಆಡಳಿತ| ನಗರದಾದ್ಯಂತ ಪೀಪಲ್ಸ್ ಆರ್ಮಿ ಸೈನಿಕರಿಂದ ಪರೇಡ್|
ಹಾಂಕಾಂಗ್(ಆ.16): ಚೀನಿ ದಬ್ಬಾಳಿಕೆ ವಿರುದ್ಧ ಸಿಡಿದೆದ್ದಿರುವ ಹಾಂಕಾಂಗ್, ಆಗಾಗ ಕೆಂಪು ಚೀನಾದ ಕಣ್ಣನ್ನು ಮತ್ತಷ್ಟು ಕೆಂಪು ಮಾಡುತ್ತಲೇ ಇರುತ್ತದೆ.
ಚೀನಾ ಅತಿಕ್ರಮಣದ ವಿರುದ್ಧ ಬಂಡೆದ್ದಿರುವ ಹಾಂಕಾಂಗ್ ಜನತೆ, ಬೃಹತ್ ಚೀನಿ ಸೈನ್ಯ ಶಕ್ತಿಯನ್ನು ಎದುರು ಹಾಕಿಕೊಂಡಿದೆ. ಕಾಲಕಾಲಕ್ಕೆ ಅನ್ಯಾಯಯುತ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಹಾಂಕಾಗ್ ಜನತೆಯ ಬಂಡಾಯ ಹತ್ತಿಕ್ಕುವ ಪ್ರಯತ್ನ ಮಾಡುವ ಚೀನಾ, ತನ್ನ ಪ್ರತಿ ಪ್ರಯತ್ನದಲ್ಲೂ ಸೋಲುತ್ತಿದೆ.
undefined
ಅದರಂತೆ ಕಳೆದ ವಾರ ಜಾರಿಗೆ ತಂದ ಚೀನಾದ ವಿವಿಧ ಭಾಗದ ಗಂಭೀರ ಅಪರಾಧಿಗಳನ್ನು ಹಾಂಕಾಂಗ್’ಗೆ ಸ್ಥಳಾಂತರಿಸುವ ಕಾನೂನನ್ನು ಹಂಕಾಂಗ್ ಜನತೆ ಒಕ್ಕೊರಲಿನಿಂದ ವಿರೋಧಿಸುತ್ತಿದೆ.
ಈ ಕಾನೂನು ಜಾರಿಯಿಂದ ಚೀನಾದ ಇತರ ಭಾಗದಲ್ಲಿರುವ ಗಂಭೀರ ಅಪರಾಧಿಗಳು ಹಾಂಕಾಂಗ್’ಗೆ ಸ್ಥಳಾಂತರಗೊಳ್ಳಲಿದ್ದು, ಇದನ್ನು ಸ್ಥಳೀಯ ಹಾಂಕಾಂಗ್ ಜನತೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆದರೆ ಯಾವುದೇ ಪ್ರಜಾಪ್ರಭುತ್ವ ಮಾದರಿಯ ಪ್ರತಿಭಟನೆಗಳನ್ನು ಸಹಿಸಿಕೊಳ್ಳದ ಚೀನಿ ಡ್ರ್ಯಾಗನ್, ಎಂದಿನಂತೆ ಜನತಾ ಪ್ರತಿಭಟನೆಯನ್ನು ಪೊಲೀಸ್ ಮತ್ತು ಸೈನ್ಯ ಬಳಸಿ ಹಿಂಸಾತ್ಮಕವಾಗಿ ಹತ್ತಿಕ್ಕುತ್ತಿದೆ.
ಕಳೆದೊಂದು ವಾರದಿಂದ ಲಕ್ಷಕ್ಕೂ ಅಧಿಕ ಹಾಕಾಂಗ್ ಜನತೆ ಚೀನಾ ಸರ್ಕಾರದ ದಬ್ಬಾಳಿಕೆ ನೀತಿ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಪೊಲೀಸ್ ಬಲ ಬಳಸಿ ಜನರನ್ನು ಚದುರಿಸಲಾಗಿದೆ.
ಅಲ್ಲದೇ ಹಾಕಾಂಗ್’ನ ವಿಮಾನ ನಿಲ್ದಾಣವನ್ನು ಸೀಜ್ ಮಾಡಿರುವುದರಿಂದ ಸಾವಿರಾರು ಜನ ವಿಮಾನ ನಿಲ್ದಾಣದಲ್ಲೇ ಸಿಲುಕಿದ್ದು, ಚೀನಿ ಸರ್ಕಾರದ ದಬ್ಬಾಳಿಕೆಯ ವಿರುದ್ಧ ನಿಲ್ದಾಣದಲ್ಲಿಯೇ ಪ್ರತಿಭಟನೆ ಕೈಗೊಂಡಿದ್ದಾರೆ.
ಆದರೆ ಶತಾಯಗತಾಯ ಪ್ರತಿಭಟನೆಯನ್ನು ಹತ್ತಿಕ್ಕಲು ನಿರ್ಧರಿಸಿರುವ ಸ್ಥಳೀಯ ಆಡಳಿತ, ಇಂದು ಗಾಧ ಪ್ರಮಾಣದಲ್ಲಿ ಪೊಲೀಸ್ ಮತ್ತು ಸೇನೆಯನ್ನು ನಗರದೊಳಗೆ ನುಗ್ಗಿಸಿದೆ. ಸೇನಾ ಟ್ಯಾಂಕರ್’ಗಳು ನಗರದೊಳಗೆ ಲಗ್ಗೆ ಇಟ್ಟಿದ್ದು, ಕ್ರೀಡಾ ಮೈದಾನವೂ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಸೈನಿಕರು ಪರೇಡ್ ನಡೆಸಿದ್ದಾರೆ.
ಶಸ್ತ್ರಸಜ್ಜಿತ ಸೇನಾ ತುಕಡಿಗಳು ನಗರವನ್ನು ವಶಕ್ಕೆ ಪಡೆದಿದ್ದು, ಯಾವ ಘಳಿಗೆಯಲ್ಲಿ ಏನು ಅನಾಹುತ ಸಂಭವಿಸುವುದೋ ಎಂಬ ಆತಂಕದಲ್ಲಿ ಹಾಕಾಂಗ್ ಜನತೆ ದಿನದೂಡುವಂತಾಗಿದೆ.