ಮೂರು ಮಕ್ಕಳನ್ನು ಹೊಂದುವ ನೀತಿ ಶೀಘ್ರ ಜಾರಿ

Published : Aug 09, 2018, 11:23 AM IST
ಮೂರು ಮಕ್ಕಳನ್ನು ಹೊಂದುವ ನೀತಿ ಶೀಘ್ರ ಜಾರಿ

ಸಾರಾಂಶ

ಹಿರಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಿರಿಯರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಚೀನಾ ಶೀಘ್ರವೇ ದಂಪತಿಯೊಂದು ಮೂರು ಮಕ್ಕಳನ್ನು ಹೊಂದಬಹು ದಾದ ಹೊಸ ನೀತಿ ಜಾರಿಗೊಳಿಸುವ ಸಾಧ್ಯತೆಯಿದೆ. 

ಬೀಜಿಂಗ್: ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾದಲ್ಲಿ ಈಗ ಮಕ್ಕಳ ನಿಯಂತ್ರಣ ನೀತಿ ಸಡಿಲಗೊಳಿಸುವ ಸಂದೇಹ  ವ್ಯಕ್ತವಾಗಿದೆ. ಹಿರಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಿರಿಯರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಚೀನಾ ಶೀಘ್ರವೇ ದಂಪತಿಯೊಂದು ಮೂರು ಮಕ್ಕಳನ್ನು ಹೊಂದಬಹು ದಾದ ಹೊಸ ನೀತಿ ಜಾರಿಗೊಳಿಸುವ ಸಾಧ್ಯತೆಯಿದೆ. 

ಜನಸಂಖ್ಯೆ ನಿಯಂತ್ರಣಕ್ಕಾಗಿ ಹಲವು ದಶಕಗಳ ಹಿಂದೆ ಜಾರಿಯಾಗಿದ್ದ ಒಂದು ಮಗುವಿನ ನೀತಿಯನ್ನು 2016 ರಲ್ಲೇ  ಚೀನಾ ಕೈಬಿಟ್ಟಿದೆ. ಅದೇ ವರ್ಷ ಎರಡು ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು. ಇದೀಗ, ಚೀನಾ ಅಂಚೆ ಇಲಾಖೆ ಬಿಡುಗಡೆ ಮಾಡಿರುವ 2019 ರ ಹಂದಿ ಸ್ಟಾಂಪ್‌ನಲ್ಲಿ, ಮೂರು ಹಂದಿ ಮರಿಗಳುಳ್ಳ ಸಂತುಷ್ಟ ಹಂದಿ ಕುಟುಂಬದ ಚಿತ್ರ ಪ್ರಕಟಿಸಲಾಗಿದೆ.

2016 ರಲ್ಲಿ ಎರಡು ಮಕ್ಕಳ ನೀತಿ ಜಾರಿಗೊಳಿಸುವುದಕ್ಕೂ ಮುನ್ನಾ ಎರಡು ಮರಿ ಕೋತಿಗಳ ಚಿತ್ರವುಳ್ಳ ಸ್ಟಾಂಪ್ ಪ್ರಕಟಿಸಲಾಗಿತ್ತು. ಹೀಗಾಗಿ, ಈಗ ಚೀನಾ ಮೂರು ಮಕ್ಕಳ ನೀತಿಯತ್ತ ಸಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ
ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್