ಜಿಹಾದ್, ಸದ್ದಾಂ, ಇಸ್ಲಾಂ' ಮುಂತಾದವನ್ನು ನಿಷೇಧಿಸಿದ ಚೀನಾ !

By Suvarna Web DeskFirst Published Apr 25, 2017, 6:26 AM IST
Highlights

ಮಕ್ಕಳಿಗೆ ಈ ರೀತಿಯ ಹೆಸರಿಟ್ಟರೆ ಮುಂದೆ ಧಾರ್ಮಿಕ ಸ್ವಾತಂತ್ರದ ಹೆಸರಿನಲ್ಲಿ ನಕಾರಾತ್ಮಕ ತೊಂದರೆಗಳನ್ನು ಎದುರಿಸುವ ಸಾಧ್ಯತೆಗಳಿರುವುದರಿಂದ' ಈ ರೀತಿಯ ಹೆಸರುಗಳನ್ನು ನಿಷೇಧಿಸಲಾಗಿದೆ' ಎಂದು ಮಾನವ ಹಕ್ಕುಗಳ ಕಾವಲು ಪಡೆ' ತಿಳಿಸಿದೆ.

ಬೀಜಿಂಗ್(ಏ.25): ಚೀನಾ ದೇಶವು ಮುಸ್ಲಿಂ ಪ್ರಾಬಲ್ಯವುಳ್ಳ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಮುಂದೆ ಜನಿಸುವ ಮುಸ್ಲಿಂ ಮಕ್ಕಳಿಗೆ ಜಿಹಾದ್, ಸದ್ದಾಂ,ಮದೀನಾ,ಕುರಾನ್, ಇಸ್ಲಾಂ, ಮೆಕ್ಕಾ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಹೆಸರುಗಳನ್ನು ನಿಷೇಧಿಸಿದೆ.

ಮಕ್ಕಳಿಗೆ ಈ ರೀತಿಯ ಹೆಸರಿಟ್ಟರೆ ಮುಂದೆ ಧಾರ್ಮಿಕ ಸ್ವಾತಂತ್ರದ ಹೆಸರಿನಲ್ಲಿ ನಕಾರಾತ್ಮಕ ತೊಂದರೆಗಳನ್ನು ಎದುರಿಸುವ ಸಾಧ್ಯತೆಗಳಿರುವುದರಿಂದ' ಈ ರೀತಿಯ ಹೆಸರುಗಳನ್ನು ನಿಷೇಧಿಸಲಾಗಿದೆ' ಎಂದು ಮಾನವ ಹಕ್ಕುಗಳ ಕಾವಲು ಪಡೆ' ತಿಳಿಸಿದೆ.

ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಮುಸ್ಲಿಂ ಹಾಗೂ ಚೀನಿ ಜನರ ನಡುವೆ ಹಿಂದಿನಿಂದಲೂ ಘರ್ಷಣೆಗಳು ನಡೆಯುತ್ತಿವೆ. ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷ ಆಡಳಿತವಿರುವ ಕಾರಣ ಈ ಸಮುದಾಯವನ್ನು ಉದ್ದೇಶಪೂರ್ವಕವಾಗಿ ದಮನಕಾರಿ ನೀತಿಯ ಮೂಲಕ ಹತ್ತಿಕುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಕ್ಸಿನ್ಜಿಯಾಂಗ್ ಪ್ರಾಂತ್ಯ'ದಲ್ಲಿ 1 ಕೋಟಿಗೂ ಹೆಚ್ಚು ಮುಸ್ಲಿಂ ಸಮುದಾಯ ವಾಸಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಏಪ್ರಿಲ್ 1ರಿಂದ ಮುಸ್ಲಿಂ ಸಮುದಾಯದವರು ಸಾರ್ವಜನಿಕ ಪ್ರದೇಶಗಳಲ್ಲಿ ಗಡ್ಡ ಹಾಗೂ ಮುಸುಕುಗಳನ್ನು ಹಾಕಬಾರದೆಂಬ ಕಾನೂನನ್ನು ಜಾರಿಗೊಳಿಸಲಾಗಿತ್ತು.

click me!