ಕಾಶ್ಮೀರ ವಿಚಾರದಲ್ಲಿ ಪಾಕ್'ಗೆ ಉಲ್ಟಾ ಹೊಡೆದ ಚೀನಾ

By Internet DeskFirst Published Sep 27, 2016, 2:31 AM IST
Highlights

ಬೀಜಿಂಗ್(ಸೆ.27): ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಬಗ್ಗೆ ಖಚಿತಪಡಿಸಲು ಚೀನಾ ಕಳೆದ ಒಂದು ವಾರದಲ್ಲಿ ಎರಡನೇ ಬಾರಿ ನಿರಾಕರಿಸಿದೆ.

ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಮೇಲೆ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಒಂದೊಮ್ಮೆ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಸಿದ್ಧವಾದರೆ, ಚೀನಾ ಪಾಕ್​​ ನೆರವಿಗೆ ಧಾವಿಸಿ ಬರುವುದಾಗಿ ಪಾಕ್‌ ಮಾಧ್ಯಮಗಳು ಮಾಡಿದ್ದ ವರದಿಯನ್ನು ಚೀನಾ ಸ್ಪಷ್ಟವಾಗಿ ತಿರಸ್ಕರಿಸಿದೆ.

Latest Videos

ಒಂದು ನೆರೆಯ ದೇಶವಾಗಿ ಮತ್ತು ಸ್ನೇಹಿತನಾಗಿ ಚೀನಾ ಮತ್ತೊಮ್ಮೆ ಕಾಶ್ಮೀರ ವಿಷಯ ಸೇರಿದಂತೆ ಇತರೆ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಮತ್ತು ಪ್ರಾದೇಶಿಕವಾಗಿ ಶಾಂತಿ ಕಾಯ್ದುಕೊಳ್ಳಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಲಿ ಅಂತ ಮನವಿ ಮಾಡಿದೆ. ಇದರೊಂದಿಗೆ ಚೀನಾ ತನ್ನ ಸರ್ವಋತು ಮಿತ್ರ ಅಂತ ತಿಳಿದುಕೊಂಡು ಬೀಗುತ್ತಿರುವ ಪಾಕಿಗೆ ಬೀಜಿಂಗ್‌'ನ ಈ ಸ್ಪಷ್ಟೀಕರಣದಿಂದ ಭಾರೀ ಹಿನ್ನಡೆ ಮತ್ತು ಮುಖಭಂಗವಾಗಿದೆ.

click me!