ಬೆಕ್ಕು ಪ್ರಿಯರಿಗೊಂದು ಶಾಕಿಂಗ್ ಸುದ್ಧಿ

By Internet DeskFirst Published Sep 26, 2016, 11:46 PM IST
Highlights

ಬೆಕ್ಕುಗಳನ್ನು ಮುದ್ದಾಡುವುದರಿಂದ ಮೆದುಳು ಸೊಂಕು ಮತ್ತು ಹೃದಯ ಸಂಬಂಧೀ ರೋಗಗಳು ಬರುತ್ತವೆಯಂತೆ.

ಬೆಕ್ಕುಗಳೆಂದರೆ ಇಷ್ಟಪಡುತ್ತೀರಾ? ಮೈ ಮೇಲೆಲ್ಲ ಅದನ್ನು ಓಡಾಡಿಸಿಕೊಂಡು ಸಂಭ್ರಮಿಸುತ್ತೀರಾ? ಹಾಗಾದರೆ ಇಲ್ಲಿದೆ ನೋಡಿ ಸಂಶೋಧನೆಯಂದರ ಆಘಾತಕಾರಿ ವರಧಿ.

ರೋಗ ನಿಯಂತ್ರಣ ಮತ್ತು ರೋಗ ತಡೆಗಟ್ಟುವಿಕೆ ಕೇಂದ್ರ ಇತ್ತೀಚೆಗೆ ನೀಡಿದ ವರಧಿಯ ಪ್ರಕಾರ ಬೆಕ್ಕುಗಳನ್ನು ಮುದ್ದಾಡುವುದರಿಂದ ಮೆದುಳು ಸೊಂಕು ಮತ್ತು ಹೃದಯ ಸಂಬಂಧೀ ರೋಗಗಳು ಬರುತ್ತವೆಯಂತೆ. ಬೆಕ್ಕುಗಳಲ್ಲಿ ಈ ರೀತಿ ಮಾರಕ ಪರಿಣಾಮಗಳನ್ನುಂಟುಮಾಡುವ ಬ್ಯಾಕ್ಟೀರಿಯಾಗಳು ಇರುತ್ತವೆ ಎಂದು ಇದು ತಿಳಿಸಿದೆ.

Latest Videos

ಡೈಲಿ ಮೇಲ್ ಎಂಬ ವರಧಿಯ ಪ್ರಕಾರ ರೋಗ ನಿಯಂತ್ರಣ ಮತ್ತು ರೋಗ ತಡೆಗಟ್ಟುವಿಕೆ ಕೇಂದ್ರ ವು 12000 ಅಮೇರಿಕನ್ನರನ್ನು ಸಂಶೋಧನೆಗೆ ಒಳಪಡಿಸಿ ಈ ವರಧಿ ತಯಾರಿಸಿದೆ. ಸಂಶೋಧನೆಗೆ ಒಳಪಟ್ಟವರಲ್ಲಿ ಜ್ವರ, ಬಳಲಿಕೆ, ತಲೆನೋವು, ಮತ್ತು ದುಗ್ದರಸ ಗ್ರಂಥಿಗಳು ಊದಿಕೊಳ್ಳುವುದು, ಮೆದುಳು ಊತ ಮತ್ತು ಹೃದಯ ಸೋಂಕುಗಳಿಂದ ಬಳಲುತ್ತಿದ್ದವರೆಲ್ಲರೂ ಕೂಡಾ ಬೆಕ್ಕುಗಳನ್ನು ಅತಿ ಹತ್ತಿರದಿಂದ ಮುದ್ದಿಸಿದವರಾಗಿದ್ದರು.

2005 ರಿಂದ 12013 ರ ಅವಧಿಯಲ್ಲಿ 1200 ಸಾವಿರ ಜನರಲ್ಲಿ ಪ್ರತೀ ವರ್ಷ 500 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರಲ್ಲಿಯೂ ಮಕ್ಕಳ ಸಂಖ್ಯೆ ಅಧಿಕವಾಗಿತ್ತು. ಇದಕ್ಕೆಲ್ಲ ಕಾರಣ ಸಾಕಿದ ಬೆಕ್ಕುಗಳನ್ನು ಮುದ್ದಿಸುವುದು, ಮತ್ತು ಅವುಗಳಿಗೆ ಮುತ್ತಿಕ್ಕುವುದು ಹಾಗೂ ಬೆಕ್ಕುಗಳನ್ನು ಮುಟ್ಟಿದ ನಂತರ ಸಾಬೂನಿನಿಂದ ಕೈ ತೊಳೆದುಕೊಳ್ಳದಿರುವುದು ಕಾರಣವಾಗಿತ್ತು.

ಆದ್ದರಿಂದ ಬೆಕ್ಕುಗಳನ್ನು ಮುದ್ದಿಸುವ ಮತ್ತು ಅವುಗಳಿಗೆ ಮುತ್ತಿಕ್ಕುವ ಮುನ್ನ ಎಚ್ಚರವಿರಲಿ

click me!