ಮಲೆನಾಡಿನಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಜಾಲ ಪತ್ತೆ

Published : Jan 31, 2017, 05:29 AM ISTUpdated : Apr 11, 2018, 12:59 PM IST
ಮಲೆನಾಡಿನಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಜಾಲ ಪತ್ತೆ

ಸಾರಾಂಶ

ಕ್ರಿಶ್ಚಿಯನ್ ಧರ್ಮ ಭೋದಕನಾಗಿದ್ದ ಮಧು ಎಂಬಾತ ಈ ಕೃತ್ಯವೆಸಗಿದ್ದು, ದಿವ್ಯಜ್ಯೋತಿ ಚಾರಿಟೆಬಲ್ ಟ್ರಸ್ಟ್ ಎಂಬ ಬ್ಯಾನರ್ ಹಾಕಿ, ಈ ಮಕ್ಕಳನ್ನು ಮನೆಯೊಂದರಲ್ಲಿ ಇಟ್ಟಿದ್ದ. ಹಿಂದೂ ಧರ್ಮದ 6 ಹೆಣ್ಣು ಮತ್ತು  3 ಗಂಡು ಮಕ್ಕಳು ಈತನ ವಶದಲ್ಲಿದ್ದರು. ಮಾಹಿತಿ ತಿಳಿದ ಮಕ್ಕಳ ಕಲ್ಯಾಣ ಸಮಿತಿ, ಪೊಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ.  

ಅನಾಥ ಮಕ್ಕಳನ್ನು ಕರೆತಂದು, ಧರ್ಮ ಬದಲಾವಣೆಗಾಗಿ ಕಳ್ಳ ಸಾಗಾಣಿಕೆ ಮಾಡ್ತಿದ್ದ ಜಾಲವೊಂದು ಮಲೆನಾಡಿನ ಶಿವಮೊಗ್ಗದಲ್ಲಿ ಪತ್ತೆಯಾಗಿದೆ. ಪೋಷಕರು ಯಾರೆಂಬುದೇ ತಿಳಿಯದ ಈ ಮಕ್ಕಳನ್ನು ಮತಾಂತರಕ್ಕೆ ಒಳಪಡಿಸುತ್ತಿದ್ದ ಮಾಹಿತಿ ಕೂಡ ತಿಳಿದು ಬಂದಿದೆ. ಶಿವಮೊಗ್ಗದ ಬೊಮ್ಮನಕಟ್ಟೆಯ ಮನೆಯೊಂದರಲ್ಲಿ 5 ರಿಂದ 12 ವರ್ಷದೊಳಗಿನ 9 ಮಕ್ಕಳನ್ನು ಅಕ್ರಮ ಬಂಧನದಲ್ಲಿಡಲಾಗಿತ್ತು. ಈ ಮಕ್ಕಳನ್ನು ಮಕ್ಕಳ ಸಂರಕ್ಷಣಾ ಘಟಕ ರಕ್ಷಿಸುವ ಮೂಲಕ, ರಾಜ್ಯವ್ಯಾಪಿಯ ಜಾಲವೊಂದನ್ನು ಬಟಾ ಬಯಲು ಮಾಡಿದ್ದಾರೆ.

ಕ್ರಿಶ್ಚಿಯನ್ ಧರ್ಮ ಭೋದಕನಾಗಿದ್ದ ಮಧು ಎಂಬಾತ ಈ ಕೃತ್ಯವೆಸಗಿದ್ದು, ದಿವ್ಯಜ್ಯೋತಿ ಚಾರಿಟೆಬಲ್ ಟ್ರಸ್ಟ್ ಎಂಬ ಬ್ಯಾನರ್ ಹಾಕಿ, ಈ ಮಕ್ಕಳನ್ನು ಮನೆಯೊಂದರಲ್ಲಿ ಇಟ್ಟಿದ್ದ. ಹಿಂದೂ ಧರ್ಮದ 6 ಹೆಣ್ಣು ಮತ್ತು  3 ಗಂಡು ಮಕ್ಕಳು ಈತನ ವಶದಲ್ಲಿದ್ದರು. ಮಾಹಿತಿ ತಿಳಿದ ಮಕ್ಕಳ ಕಲ್ಯಾಣ ಸಮಿತಿ, ಪೊಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ.  ಇವರು ಚಿಕ್ಕಮಗಳೂರು, ದಾವಣಗೆರೆ, ಬೆಂಗಳೂರು ಹಾಗೂ ಚಿತ್ರದುರ್ಗ ಮೂಲದ ಮಕ್ಕಳು ಎಂಬುದು ತಿಳಿದುಬಂದಿದೆ. ಈ ಮಕ್ಕಳನ್ನು ಕಾನೂನು ಬಾಹಿರವಾಗಿ ಯಾವುದೇ ದಾಖಲೆಯಿಲ್ಲದೆ ಇಟ್ಟಕೊಂಡಿದ್ದ ಮಧು,  ಮಕ್ಕಳ ಪೋಷಕರೆಂದು ಕೆಲವರ ಬಳಿ 20 ಸಾವಿರ ರೂಪಾಯಿ ಬಾಂಡ್ ಕೂಡ ಬರೆಯಿಸಿ ಕೊಂಡಿದ್ದ. ಈ ಹಿನ್ನೆಲೆ ಧರ್ಮ ಬೋಧಕ ಮಧು ವಿರುದ್ಧ 2015 ರ ನೂತನ ಬಾಲ ನ್ಯಾಯ ಕಾಯ್ದೆ ಕಲಂ 42 , ಐಪಿಸಿ 363 ಮತ್ತು 365 ರ ಅಡಿಯಲ್ಲಿ ವಿನೋಬ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.  ಕಳೆದೊಂದು ವರ್ಷದಿಂದ ಜಿಲ್ಲೆಯ ಭದ್ರಾವತಿ , ಶಿವಮೊಗ್ಗ ನಗರದ ಹಲವೆಡೆ ಈ ಮಧು ಮಕ್ಕಳನ್ನು ಸಾಗಾಟ ಮಾಡಿದ್ದ ಎಂಬ ಮಾಹಿತಿ ಕೂಡ ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎರಡನೇ ಭಾರಿ ಪತ್ನಿಯಿಂದ ಮೋಸ, ಜಿಪಿಎಸ್ ಟ್ರಾಕರ್‌ನಿಂದ ಹೊಟೆಲ್ ಸರಸ ಕಂಡು ಕಣ್ಣೀರಿಟ್ಟ ಪತಿ
ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಕೊಡಿಸಿದ ಪೊಲೀಸ್ ತನಿಖಾ ತಂಡಕ್ಕೆ ಭರ್ಜರಿ ಬಹುಮಾನ!